×
Ad

ಇಸ್ರೋ ಭೂ ವೀಕ್ಷಣಾ ಉಪಗ್ರಹ ಉಡ್ಡಯನ ವಿಫಲ

Update: 2025-05-18 10:09 IST

PSLV-C61 launches EOS-09 to space. (Photo: Isro)

ಶ್ರೀಹರಿಕೋಟಾ: ಭೂ ವೀಕ್ಷಣಾ ಉಪಗ್ರಹ ಉಡ್ಡಯನ ವಿಫಲವಾಗಿದೆ ಎಂದು ಇಸ್ರೋ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ ನಾರಾಯಣನ್ ಹೇಳಿದ್ದಾರೆ.

ರವಿವಾರ ಬೆಳಗ್ಗೆ ರಾಕೆಟ್ ಅನ್ನು ಬೆಳಿಗ್ಗೆ 5.59ಕ್ಕೆ ಪೂರ್ವಪ್ರತ್ಯಯ ಸಮಯದಲ್ಲಿ ಉಡಾಯಿಸಲಾಯಿತು. ಉಡ್ಡಯನದ ಬಳಿಕ ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ61 ರಾಕೆಟ್ ಮೂರನೇ ಹಂತದಲ್ಲಿ ತಾಂತ್ರಿಕ ವೈಫಲ್ಯ ಅನುಭವಿಸಿದೆ.

`ಪಿಎಸ್‌ಎಲ್‌ವಿಸಿ61 ಇಒಎಸ್-09 ಮಿಷನ್ ಪ್ರಯುಕ್ತ ಇಂದು ನಾವು ಶ್ರೀಹರಿಕೋಟಾದಿಂದ ಇಸ್ರೋದ 101ನೇ ಉಡ್ಡಯನವನ್ನು ಪ್ರಾರಂಭಿಸಿದ್ದೆವು. ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಮೂರನೇ ಹಂತದ ಕಾರ್ಯನಿರ್ವಹಣೆಯ ಸಮಯದಲ್ಲಿ ಕಾರ್ಯಾಚರಣೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ' ಎಂದು ನಾರಾಯಣನ್ ಹೇಳಿದ್ದಾರೆ.

ವೈಫಲ್ಯಕ್ಕೆ ಕಾರಣ ಏನು ಎಂಬುದನ್ನು ವಿಶ್ಲೇಷಣೆ ಮಾಡಿದ ನಂತರ ಮುಂದಿನ ಕಾರ್ಯಚರಣೆ ಬಗ್ಗೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇಒಎಸ್-09 ಮಿಷನ್, 2022ರಲ್ಲಿ ಉಡ್ಡಯನ ಮಾಡಲಾಗಿದ್ದ ಇಒಎಸ್-04 ಅನ್ನು ಹೋಲುವ ಪುನರಾವರ್ತಿತ ಉಪಗ್ರಹವಾಗಿದೆ. ಉಪಗ್ರಹದ ಪೇಲೋಡ್, ಸಿಂಥೆಟಿಕ್ ಅಪರ್ಚರ್ ರಾಡಾರ್ (ಎಸ್‌ಎಆರ್) ಹಗಲು ರಾತ್ರಿ, ಎಲ್ಲ ಹವಾಮಾನ ಪರಿಸ್ಥಿತಿಗಳಲ್ಲಿ ವಿವಿಧ ಭೂ ವೀಕ್ಷಣಾ ಅಪ್ಲಿಕೇಶನ್‌ಗಳಿಗೆ ಚಿತ್ರಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News