×
Ad

ಜಮ್ಮು-ಕಾಶ್ಮೀರ | ದೇಶ ವಿರೋಧಿ ಚಟುವಟಿಕೆ ಆರೋಪ : ಮತ್ತಿಬ್ಬರು ಸರಕಾರಿ ನೌಕರರನ್ನು ವಜಾಗೊಳಿಸಿದ ಲೆಫ್ಟಿನೆಂಟ್ ಗವರ್ನರ್

Update: 2025-10-30 21:00 IST

 ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ | Photo Credit  : PTI 

ಶ್ರೀನಗರ, ಅ. 30: ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಇಬ್ಬರು ಸರಕಾರಿ ನೌಕರರನ್ನು ಜಮ್ಮು ಹಾಗೂ ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾರತದ ಸಂವಿಧಾನದ 311ನೇ ವಿಧಿ ಬಳಸಿಕೊಂಡು ಸೇವೆಯಿಂದ ವಜಾಗೊಳಿಸಿದ್ದಾರೆ.

ಗುಲಾಂ ಹುಸೈನ್ ಹಾಗೂ ಮಾಜ್ದ ಇಕ್ಬಾಲ್ ದಾರ್ ವಜಾಗೊಂಡ ನೌಕರರು. ಇಬ್ಬರೂ ಶಾಲಾ ಶಿಕ್ಷಣ ಇಲಾಖೆಯ ಅಧ್ಯಾಪಕರು.

ಚುನಾಯಿತ ಸರಕಾರ ನೌಕರರನ್ನು ವಜಾಗೊಳಿಸುವುದನ್ನು ವಿರೋಧಿಸಿದ್ದರು ಕೂಡ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ಸರಕಾರಿ ನೌಕರರನ್ನು ವಜಾಗೊಳಿಸಿದ್ದಾರೆ.

ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ಇದುವರೆಗೆ ಜಮ್ಮು ಹಾಗೂ ಕಾಶ್ಮೀರದ 80ಕ್ಕೂ ಅಧಿಕ ಉದ್ಯೋಗಿಗಳನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಭಾರತದ ಸಂವಿಧಾನ 311ನೇ ವಿಧಿ ಬಳಸಿ ವಜಾಗೊಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News