×
Ad

ಜಮ್ಮು-ಕಾಶ್ಮೀರ: ಸೇನಾಧಿಕಾರಿಯಿಂದ ಗುಂಡು ಹಾರಾಟ, ಐವರಿಗೆ ಗಾಯ

Update: 2023-10-06 23:00 IST

                                                                     ಸಾಂದರ್ಭಿಕ ಚಿತ್ರ | Photo: PTI

ಶ್ರೀನಗರ : ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿನ ಶಿಬಿರವೊಂದರಲ್ಲಿ ಮೇಜರ್ ದರ್ಜೆಯ ಸೇನಾಧಿಕಾರಿಯೋರ್ವರು ಗುರುವಾರ ತನ್ನ ಸಹೋದ್ಯೋಗಿಗಳತ್ತ ಗುಂಡು ಹಾರಾಟ ನಡೆಸಿ ಗ್ರೆನೇಡ್ ಸ್ಫೋಟಿಸಿದ್ದು, ಐವರು ಗಾಯಗೊಂಡಿದ್ದಾರೆ.

ಥನಮಂಡಿ ಸಮೀಪದ ನೀಲಿ ಪೋಸ್ಟ್ ನಲ್ಲಿ ಶೂಟಿಂಗ್ ತಾಲೀಮಿನ ಸಂದರ್ಭ ಗುಂಡು ಹಾರಾಟ ನಡೆಸಿದ್ದ ಅಧಿಕಾರಿ ಬಳಿಕ ಶಸ್ತ್ರಾಗಾರದಲ್ಲಿ ಬಚ್ಚಿಟ್ಟುಕೊಂಡಿದ್ದರು. ಸುಮಾರು ಎಂಟು ಗಂಟೆಗಳ ಪ್ರಯತ್ನದ ಬಳಿಕ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,ಗಾಯಾಳುಗಳಲ್ಲಿ ಮೂವರು ಅಧಿಕಾರಿಗಳು ಸೇರಿದ್ದಾರೆ.

ಇದು ಭಯೋತ್ಪಾದಕ ದಾಳಿಯಲ್ಲ ಎಂದು ಜಮ್ಮುವಿನಲ್ಲಿ ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಲೆ.ಕ.ಸುನೀಲ ಬರ್ತ್ವಾಲ್ ಸ್ಪಷ್ಟಪಡಿಸಿದ್ದಾರೆ.

ಸೇನೆಯು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಗೊಳಿಸಿಲ್ಲವಾದರೂ,ಆರೋಪಿ ಅಧಿಕಾರಿ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News