×
Ad

ದಲಿತ ನಾಯಕಿಯನ್ನು ರಾಷ್ಟ್ರೀಯ ಸಮಿತಿಗೆ ನೇಮಿಸಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

Update: 2025-05-16 21:40 IST

 ಜಯಂತಿ ರಾಜನ್ | PC : Special Arrangement \ onmanorama.com 

ಕೋಝಿಕ್ಕೋಡ್‌ : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಸಮಿತಿಗೆ ಜಯಂತಿ ರಾಜನ್ ಅವರನ್ನು ಪದಾಧಿಕಾರಿಯಾಗಿ ಆಯ್ಕೆ ಮಾಡಿದೆ. ಆ ಮೂಲಕ ಮುಸ್ಲಿಮೇತರರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಲೀಗ್ ಈ ಮೂಲಕ ಪ್ರತ್ಯುತ್ತರ ನೀಡಿದೆ.

ಜಯಂತಿ ರಾಜನ್ ಅವರನ್ನು ರಾಷ್ಟ್ರೀಯ ಪದಾಧಿಕಾರಿಯಾಗಿ ಆಯ್ಕೆ ಮಾಡುವ ನಿರ್ಧಾರ ಲೀಗ್‌ ಗೆ ಸಂಬಂಧಿಸಿ ಐತಿಹಾಸಿಕ ನಿರ್ಧಾರವಾಗಿದೆ. ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ರಾಷ್ಟ್ರೀಯ ಸಮಿತಿಗೆ ಪದಾಧಿಕಾರಿಯಾಗಿ ಸೇರ್ಪಡೆಯಾಗಿದ್ದಾರೆ.

ಚೆನ್ನೈನಲ್ಲಿ ನಡೆದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ ನ ಸಾಮಾನ್ಯ ಮಂಡಳಿ ಸಭೆಯಲ್ಲಿ ಜಯಂತಿ ರಾಜನ್ ಮತ್ತು ತಮಿಳುನಾಡಿನ ಫಾತಿಮಾ ಮುಝಾಫರ್ ಅವರನ್ನು ರಾಷ್ಟ್ರೀಯ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದೆ. ಐಯುಎಂಎಲ್ ಪಕ್ಷದಲ್ಲಿ ಮಹಿಳೆಯರು, ದಲಿತರು ಮತ್ತು ಮುಸ್ಲಿಮೇತರರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಕೇಳಿಬರುತ್ತಿರುವ ಟೀಕೆಗಳಿಗೆ ಲೀಗ್‌ ನ ಪ್ರತಿಕ್ರಿಯೆಯಾಗಿ ಜಯಂತಿಯವರನ್ನು ಪಕ್ಷದ ರಾಷ್ಟ್ರೀಯ ಪದಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

Jayanthi Rajan, Fathima Muzaffar (Middle). Photo: Special Arrangement

 ಈ ಕುರಿತು ಪ್ರತಿಕ್ರಿಯಿಸಿದ ಜಯಂತಿ ರಾಜನ್, ʼಇದು ಸಂಪೂರ್ಣವಾಗಿ ಅನಿರೀಕ್ಷಿತ ಆಯ್ಕೆಯಾಗಿತ್ತುʼ ಎಂದು ಹೇಳಿದರು. ʼಇದು ಕೇವಲ ಧರ್ಮಾಧಾರಿತ ಪಕ್ಷವಲ್ಲ. ನೀವು ಕೆಲಸ ಮಾಡಲು ಸಿದ್ಧರಿದ್ದರೆ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಲೀಗ್ ನಿಮ್ಮನ್ನು ಸ್ವಾಗತಿಸುತ್ತದೆ. ಅವರು ಯಾವಾಗಲೂ ನನ್ನನ್ನು ಪ್ರೀತಿಯ ಸಹೋದರಿಯಂತೆ ನಡೆಸಿಕೊಂಡಿದ್ದಾರೆ ಮತ್ತು ನನಗೆ ಹೆಚ್ಚಿನ ಪರಿಗಣನೆಯನ್ನು ನೀಡಿದ್ದಾರೆʼ ಎಂದು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ ಕೆ ಕುಂಞಾಲಿಕುಟ್ಟಿ, ವಯನಾಡಿನ ಜಯಂತಿ ರಾಜನ್ ಮತ್ತು ತಮಿಳುನಾಡಿನ ಫಾತಿಮಾ ಮುಝಾಫರ್ ಅವರನ್ನು ರಾಷ್ಟ್ರೀಯ ಸಹಾಯಕ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ಅವರನ್ನು ನೇಮಿಸುವ ನಿರ್ಧಾರವು ಮಹಿಳೆಯರು ಮತ್ತು ದಲಿತರಿಗೆ ಅವಕಾಶಗಳನ್ನು ನೀಡುವ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಹೇಳಿದರು.

Jayanthi Rajan is a Dalit leader and native of Irulam in Wayanad. Photo: jaya.rajan.100/facebook

 ವಯನಾಡಿನ ಇರುಳಮ್ ನಿವಾಸಿಯಾಗಿರುವ ದಲಿತ ನಾಯಕಿ ಜಯಂತಿ ಪ್ರಸ್ತುತ ಮಹಿಳಾ ಲೀಗ್ ನ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದಾರೆ. ಈ ಹಿಂದೆ ಪನಮರಮ್ ಬ್ಲಾಕ್ ಪಂಚಾಯತ್ ಮತ್ತು ಪೂಥಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅವರ ರಾಜಕೀಯ ಜೀವನವು 2008ರಲ್ಲಿ ಆರಂಭವಾಯಿತು. ಕಾಂಗ್ರೆಸ್ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ ಜಯಂತಿ 2010ರಲ್ಲಿ ಮುಸ್ಲಿಂ ಲೀಗ್ ಸದಸ್ಯತ್ವವನ್ನು ಪಡೆದುಕೊಂಡಿದ್ದರು. ಫಾತಿಮಾ ಮುಝಾಫರ್ ಚೆನ್ನೈ ಕಾರ್ಪೊರೇಷನ್‌ ನ ಕೌನ್ಸಿಲರ್ ಆಗಿದ್ದಾರೆ.

Jayanthi Rajan with Priyanka Gandhi. Photo: jaya.rajan.100/facebook

 ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷದ ಹಿರಿಯ ನಾಯಕತ್ವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಕೆ.ಎಂ. ಖಾದರ್ ಮೊಯ್ದೀನ್ ರಾಷ್ಟ್ರೀಯ ಅಧ್ಯಕ್ಷರಾಗಿ, ಪಾಣಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಙಳ್ ರಾಜಕೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿ ಮತ್ತು ಪಿ.ಕೆ. ಕುಂಞಾಲಿಕುಟ್ಟಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News