×
Ad

ಜಾರ್ಖಂಡ್ ನ ಏಕೈಕ ಕಾಂಗ್ರೆಸ್ ಸಂಸದೆ ಗೀತಾ ಕೋಡಾ ಬಿಜೆಪಿಗೆ ಸೇರ್ಪಡೆ

Update: 2024-02-26 21:39 IST

ಗೀತಾ ಕೋಡಾ | Photo: @ians_india

ರಾಂಚಿ: ಲೋಕಸಭಾ ಚುನಾವಣೆಗಳಿಗೆ ಮುನ್ನ ಜಾರ್ಖಂಡನ ಏಕೈಕ ಕಾಂಗ್ರೆಸ್ ಸಂಸದೆ ಹಾಗೂ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರ ಪತ್ನಿ ಗೀತಾ ಕೋಡಾ (ಸಿಂಗಭೂಮ್ ಎಸ್ಟಿ ಮೀಸಲು ಕ್ಷೇತ್ರ) ಅವರು ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇಲ್ಲಿಯ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಾಬುಲಾಲ ಮರಾಂಡಿ ಅವರ ಉಪಸ್ಥಿತಿಯಲ್ಲಿ ಕೋಡಾ ಕೇಸರಿ ಪಕ್ಷವನ್ನು ಸೇರಿದರು.

‘ನಾನು ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದೇನೆ. ಕಾಂಗ್ರೆಸ್ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿಕೊಳ್ಳುವ ಮೂಲಕ ದೇಶವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪಕ್ಷವು ತಾನು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯವುದಾಗಿ ಹೇಳುತ್ತದೆ, ಆದರೆ ಅದು ತನ್ನ ಕಟುಂಬವನ್ನು ಮಾತ್ರ ಜೊತೆಯಲ್ಲಿ ಕರೆದೊಯ್ಯುತ್ತದೆ ’ಎಂದು ಬಿಜೆಪಿಗೆ ಸೇರ್ಪಡೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಾ ಹೇಳಿದರು.

2019ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ-ಎಜೆಎಸ್ಯು ಮೈತ್ರಿಕೂಟವು ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಪೈಕಿ 12ನ್ನು ಗೆದ್ದುಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News