×
Ad

"ತಂದೆಯಂತೆ ನಿನ್ನನ್ನೂ ಹತ್ಯೆ ಮಾಡುತ್ತೇವೆ": ಎನ್‌ಸಿಪಿ ನಾಯಕ ಜೀಶನ್ ಸಿದ್ದೀಕಿಗೆ ಜೀವ ಬೆದರಿಕೆ

Update: 2025-04-22 12:23 IST

Photo credit: indiatoday.in

ಮುಂಬೈ: ಮಹಾರಾಷ್ಟ್ರದ ಮಾಜಿ ಶಾಸಕ ಮತ್ತು ಎನ್‌ಸಿಪಿ ನಾಯಕ ಜೀಶನ್ ಸಿದ್ದೀಕಿ ಅವರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ.

10 ಕೋಟಿ ರೂಪಾಯಿ ನಗದು ಪಾವತಿಸದಿದ್ದಲ್ಲಿ ತಂದೆ ಬಾಬಾ ಸಿದ್ದೀಕಿ ಅವರಿಗೆ ಆದ ಸ್ಥಿತಿಯೇ ನಿಮಗೆ ಬರಲಿದೆ ಎಂದು ಬೆದರಿಕೆ ಸಂದೇಶ ಕಳುಹಿಸಿರುವುದಾಗಿ ಜೀಶನ್ ಸಿದ್ದೀಕಿ ಹೇಳಿದ್ದಾರೆ.

ʼಕಳೆದ ಮೂರು ದಿನಗಳಿಂದ ನಾನು ನಿರಂತರವಾಗಿ ಬೆದರಿಕೆ ಸಂದೇಶವಿರುವ ಇಮೇಲ್‌ ಅನ್ನು ಸ್ವೀಕರಿಸುತ್ತಿದ್ದೇನೆ. 10 ಕೋಟಿ ರೂ. ನೀಡದಿದ್ದರೆ ಬಾಬಾ ಸಿದ್ದೀಕಿಯಂತೆ ನಿನ್ನನ್ನು ಕೂಡ ಹತ್ಯೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಬೆದರಿಕೆ ಸಂದೇಶ ಕಳುಹಿಸುದಾತ ತನ್ನನ್ನು ಡಿ-ಕಂಪೆನಿಯ ಸದಸ್ಯ ಎಂದು ಹೇಳಿಕೊಂಡಿದ್ದಾನೆ. ಬೆದರಿಕೆ ಸಂದೇಶದ ಬಗ್ಗೆ ಪೊಲೀಸರಿಗೆ ತಿಳಿಸದಂತೆಯೂ ಎಚ್ಚರಿಸಿದ್ದಾನೆ ಎಂದು ಜೀಶನ್ ಸಿದ್ದೀಕಿ ಹೇಳಿದ್ದಾರೆ.

ಜೀಶನ್ ಸಿದ್ದೀಕಿ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News