×
Ad

ಗವಾಯಿ ಉತ್ತರಾಧಿಕಾರಿಯಾಗಿ ನ್ಯಾ. ಸೂರ್ಯ ಕಾಂತ್; ನ.24ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕಾರ

Update: 2025-11-23 21:36 IST

ನ್ಯಾ. ಸೂರ್ಯ ಕಾಂತ್ | PC : PTI 

ಹೊಸದಿಲ್ಲಿ, ನ. 23: ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೂರ್ಯ ಕಾಂತ್ ಅವರು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ 370ನೇ ವಿಧಿಯ ರದ್ದು, ಬಿಹಾರದ ಮತದಾರರ ಪಟ್ಟಿಯ ಪರಿಷ್ಕರಣೆ, ಪೆಗಾಸಸ್ ಸ್ಪೈವೇರ್ ಪ್ರಕರಣಗಳ ಕುರಿತಂತೆ ಹಲವು ಮಹತ್ವದ ತೀರ್ಪು, ಆದೇಶಗಳನ್ನು ನೀಡಿದ್ದರು.

ಸೂರ್ಯ ಕಾಂತ್ ಅವರು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್ 30ರಂದು ನೇಮಕ ಮಾಡಲಾಗಿತ್ತು.

ಅವರು ಮುಂದಿನ ಸುಮಾರು 15 ತಿಂಗಳು ಅಧಿಕಾರದಲ್ಲಿ ಇರಲಿದ್ದಾರೆ. 2027 ಫೆಬ್ರವರಿ 9ರಂದು ತನ್ನ 65ನೇ ವಯಸ್ಸಿನಲ್ಲಿ ನಿವೃತ್ತರಾಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News