×
Ad

ಭಾರಿ ಜನಸಮೂಹ ಸೇರಿದ ಮಾತ್ರಕ್ಕೆ, ಅದು ಮತವಾಗಿ ಪರಿವರ್ತನೆಯಾಗುವುದಿಲ್ಲ: ನಟ ವಿಜಯ್ ಸಮಾವೇಶಗಳ ಬಗ್ಗೆ ಕಮಲ್ ಹಾಸನ್ ವ್ಯಂಗ್ಯ

Update: 2025-09-22 17:51 IST

 ನಟ ವಿಜಯ್,  ಕಮಲ್ ಹಾಸನ್ |PTI

ಚೆನ್ನೈ: ಜನರನ್ನು ಬೃಹತ್ ಪ್ರಮಾಣದಲ್ಲಿ ಆಕರ್ಷಿಸಿದ ಮಾತ್ರಕ್ಕೆ ಅವರೆಲ್ಲ ಮತವಾಗಿ ಪರಿವರ್ತನೆಯಾಗುವುದಿಲ್ಲ ಎಂದು ಹೇಳಿರುವ ಮಕ್ಕಳ್ ನೀಧಿ ಮೈಯಮ್ ಪಕ್ಷದ ಸಂಸ್ಥಾಪಕ ಕಮಲ್ ಹಾಸನ್, ಈ ಮಾತು ನಾನೂ ಒಳಗೊಂಡಂತೆ ತಮಿಳಗ ವೆಟ್ರಿ ಕಳಗಂ ಮುಖ್ಯನಸ್ಥ ನಟ, ರಾಜಕಾರಣಿ ವಿಜಯ್ ಗೂ ಅನ್ವಯಿಸುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಟ, ರಾಜಕಾರಣಿ ವಿಜಯ್ ಸಮಾವೇಶಗಳಲ್ಲಿ ನೆರೆಯುತ್ತಿರುವ ಬೃಹತ್ ಸಂಖ್ಯೆಯ ಜನರ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, “ಪೂರ್ತಿ ಜನಸಂದಣಿ ಮತಗಳಾಗಿ ಪರಿವರ್ತನೆಯಾಗುವುದಿಲ್ಲ” ಎಂದು ಕಮಲ್ ಹಾಸನ್ ಉತ್ತರಿಸಿದ್ದಾರೆ. “ಇದು ಖಚಿತ, ಅದೆಲ್ಲ ಮತಗಳಾಗಿ ಪರಿವರ್ತನೆಯಾಗುವುದಿಲ್ಲ. ಈ ಮಾತು ಎಲ್ಲ ನಾಯಕರಿಗೂ ಅನ್ವಯಿಸುತ್ತದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಮಾತು ಕೇವಲ ನಟ ವಿಜಯ್ ಗೆ ಮಾತ್ರ ಅನ್ವಯಿಸುತ್ತದೆಯೆ ಎಂದು ಸುದ್ದಿಗಾರರು ಮತ್ತೆ ಪ್ರಶ್ನಿಸಿದಾಗ, “ಈ ಮಾತು ಎಲ್ಲರಿಗೂ ಅನ್ವಯವಾಗುವಾಗ, ಇದರಿಂದ ವಿಜಯ್ ಮಾತ್ರ ಹೇಗೆ ಹೊರತಾಗುತ್ತಾರೆ? ಇದು ನಾನು ಹಾಗೂ ಭಾರತದಲ್ಲಿರುವ ಎಲ್ಲ ನಾಯಕರಿಗೂ ಅನ್ವಯವಾಗುತ್ತದೆ. ನೀವು ಜನಸಂದಣಿಯನ್ನು ಆಕರ್ಷಿಸಿರಬಹುದು, ಆದರೆ, ಅವರೆಲ್ಲ ಮತಗಳಾಗಿ ಪರಿವರ್ತನೆಯಾಗುವುದಿಲ್ಲ” ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News