×
Ad

ಮಾನಹಾನಿ ಪ್ರಕರಣ| ಅ. 27ರಂದು ಖುದ್ದಾಗಿ ಹಾಜರಾಗಿ: ಕಂಗನಾ ರಣಾವತ್ ಗೆ ಪಂಜಾಬ್ ನ್ಯಾಯಾಲಯ ಸೂಚನೆ

Update: 2025-09-30 16:56 IST

 ಕಂಗನಾ ರಣಾವತ್ | Photo Credit :  PTI 

ಬಠಿಂಡಾ: ತಾನು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತೇನೆ ಎಂಬ ನಟಿ, ಸಂಸದೆ ಕಂಗನಾ ರಣಾವತ್ ಅವರ ಮನವಿಯನ್ನು ಸೋಮವಾರ ತಳ್ಳಿ ಹಾಕಿರುವ ಪಂಜಾಬ್ ನ್ಯಾಯಾಲಯವೊಂದು, ಮಾನಹಾನಿ ಪ್ರಕರಣದಲ್ಲಿ ಅಕ್ಟೋಬರ್ 27ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಅವರಿಗೆ ಸೂಚಿಸಿದೆ.

2020-21ರಲ್ಲಿ ನಡೆದಿದ್ದ ರೈತರ ಪ್ರತಿಭಟನೆಯ ವೇಳೆ ಪಂಜಾಬ್ ನ ಬಠಿಂಡಾ ಜಿಲ್ಲೆಯ ಬಹದ್ದೂರ್ ಗಢ ಜಂದಿಯನ್ ಗ್ರಾಮದ ದೂರುದಾರೆ ಮಹಿಂದರ್ ಕೌರ್ ಕುರಿತ ಟ್ವೀಟ್ ಅನ್ನು ತಮ್ಮದೇ ಅಭಿಪ್ರಾಯದೊಂದಿಗೆ ಕಂಗನಾ ರಣಾವತ್ ಹಂಚಿಕೊಂಡಿದ್ದರು. ಈ ಟ್ವೀಟ್ ವಿರುದ್ಧ ಮಹಿಂದರ್ ಕೌರ್ ಮಾನಹಾನಿ ದೂರು ದಾಖಲಿಸಿದ್ದರು.

ಈ ಸಂಬಂಧ, ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು ಎಂದು ಕಂಗನಾ ರಣಾವತ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನಂತರ, ಕಂಗನಾ ರಣಾವತ್ ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News