×
Ad

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಬೆನ್ನಲ್ಲೇ ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ ಭದ್ರತೆ ಹೆಚ್ಚಳ

Update: 2025-08-11 18:59 IST

Photo | indiatoday

ಹೊಸದಿಲ್ಲಿ : ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಮೇಲೆ ಎರಡನೇ ಬಾರಿಗೆ ಗುಂಡಿನ ದಾಳಿ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಹಿನ್ನೆಲೆಯಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಅವರಿಗೆ ಮುಂಬೈ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಕೆನಡಾದ ಸರ್ರೆಯಲ್ಲಿ ಇತ್ತೀಚೆಗೆ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆ ಪ್ರಾರಂಭವಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ಜುಲೈ 9ರಂದು ಕೆಫೆಯ ಮೇಲೆ ಗುಂಡಿನ ದಾಳಿ ನಡೆದಿತ್ತು. ಆಗಸ್ಟ್ 7ರಂದು ಮತ್ತೊಮ್ಮೆ ಹಿಂಸಾತ್ಮಕ ದಾಳಿ ನಡೆದಿತ್ತು. ಇದು ಕಪಿಲ್ ಶರ್ಮಾ ಅವರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಉಂಟು ಮಾಡಿತ್ತು.

ಆಗಸ್ಟ್ 7ರಂದು ನಡೆದ ದಾಳಿಯ ಹೊಣೆಯನ್ನು ಗುರ್ಪ್ರೀತ್ ಸಿಂಗ್ ಅಲಿಯಾಸ್ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಎಂಬ ಎರಡು ಗ್ಯಾಂಗ್‌ಗಳು ಹೊತ್ತುಕೊಂಡಿತ್ತು. ನಾವು ಆತನಿಗೆ ಕರೆ ಮಾಡಿದ್ದೆವು, ಆದರೆ ಆತ ಉತ್ತರಿಸಲಿಲ್ಲ ಹಾಗಾಗಿ ನಾವು ಈ ಕ್ರಮ ಕೈಗೊಳ್ಳಬೇಕಾಯಿತು, ಇನ್ನೂ ಮುಂದಿನ ದಿನಗಳಲ್ಲಿ ನಮ್ಮ ಕರೆಗೆ ಉತ್ತರಿಸದಿದ್ದರೆ ಮುಂಬೈಗೆ ಬಂದು ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News