×
Ad

ಚುನಾವಣಾ ಆಯೋಗ ಸದಾ ಮೋದಿ ಸರಕಾರದ ಕೈಗೊಂಬೆಯಾಗಿದೆ: ಕಪಿಲ್ ಸಿಬಲ್

Update: 2025-07-13 15:44 IST

ಕಪಿಲ್ ಸಿಬಲ್ | PC : PTI

ಹೊಸದಿಲ್ಲಿ: ಚುನಾವಣಾ ಆಯೋಗ ಸದಾ ಕಾಲ ನರೇಂದ್ರ ಮೋದಿ ಸರಕಾರದ ಕೈಗೊಂಬೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಗಂಭೀರ ಆರೋಪ ಮಾಡಿದ್ದಾರೆ.

PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಕಪಿಲ್ ಸಿಬಲ್, “ಬಿಹಾರದಲ್ಲಿ ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ಮತದಾರರ ವಿಶೇಷ ಪರಿಷ್ಕರಣೆಯು ಬಹುಸಂಖ್ಯಾತರ ನೇತೃತ್ವದ ಸರಕಾರ ಅಧಿಕಾರದಲ್ಲಿ ಉಳಿಯುವಂತೆ ನೋಡಿಕೊಳ್ಳುವ ಅಸಾಂವಿಧಾನಿಕ ಕ್ರಮವಾಗಿದೆ” ಎಂದು ಕಿಡಿ ಕಾರಿದ್ದಾರೆ.

ಪ್ರತಿಯೊಬ್ಬ ಚುನಾವಣಾ ಆಯುಕ್ತರು ಸರಕಾರದೊಂದಿಗಿನ ಹೊಂದಾಣಿಕೆಯಲ್ಲಿ ಈ ಹಿಂದಿನ ಸರಕಾರಗಳನ್ನು ಮೀರಿಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಟೀಕಿಸಿದ ಮಾಜಿ ಕೇಂದ್ರ ಕಾನೂನು ಸಚಿವರೂ ಆದ ಕಪಿಲ್ ಸಿಬಲ್, ಚುನಾವಣಾ ಆಯೋಗ ಯಾವುದೇ ಪೌರತ್ವ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿಲ್ಲ. ಏಕೆಂದರೆ, ಚುನಾವಣಾ ಆಯೋಗ ತನ್ನ ಸ್ವಾಯತ್ತತೆಯನ್ನು ಪ್ರದರ್ಶಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದೇ ವೇಳೆ, ಸಂಸತ್ ನ ಮಾನ್ಸೂನ್ ಅಧಿವೇಶನದ ವೇಳೆ, ಬೇರೆಲ್ಲ ವಿಚಾರಗಳಿಗಿಂತ, ಬಿಹಾರ ಮತದಾರರ ಪರಿಷ್ಕರಣೆ ವಿಚಾರವೇ ಅತ್ಯಂತ ಪ್ರಮುಖ ಚರ್ಚೆಯ ವಿಷಯವಾಗಿದೆ ಎಂದೂ ಅವರು ಒತ್ತಿ ಹೇಳಿದ್ದಾರೆ.

ಆದರೆ, 22 ವರ್ಷಗಳ ನಂತರ ಬಿಹಾರದಲ್ಲಿ ಚುನಾವಣಾ ಆಯೋಗದ ವತಿಯಿಂದ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕ್ರಮವನ್ನು ಸಮರ್ಥಿಸಿಕೊಂಡಿರುವ ಚುನಾವಣಾ ಆಯೋಗ, ಈ ಕ್ರಮದಿಂದ ಅನರ್ಹರು ಮತದಾರರ ಪಟ್ಟಿಯಿಂದ ಹೊರಹೋಗಲಿದ್ದು, ಕಾನೂನಿನ ಪ್ರಕಾರ ಅರ್ಹರಿಗೆ ಮಾತ್ರ ಮತದಾನದ ಅವಕಾಶ ದೊರೆಯುತ್ತದೆ ಎಂದು ಸ್ಪಷ್ಟಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News