×
Ad

ಹರ್ಯಾಣದ ಬಿಜೆಪಿ ಸರಕಾರ ಕುಡಿಯುವ ನೀರಿಗೆ ವಿಷ ಬೆರೆಸುತ್ತಿದೆ: ಕೇಜ್ರಿವಾಲ್ ಗಂಭೀರ ಆರೋಪ

Update: 2025-01-27 20:36 IST

 ಅರವಿಂದ್ ಕೇಜ್ರಿವಾಲ್ | PC : PTI  

ಹೊಸದಿಲ್ಲಿ: ದಿಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಗಳ ಪರಸ್ಪರ ಕೆಸರೆರಚಾಟ ತಾರಕಕ್ಕೇರಿದ್ದು, “ಹರ್ಯಾಣದ ಬಿಜೆಪಿ ಸರಕಾರ ಕುಡಿಯುವ ನೀರಿಗೆ ವಿಷ ಬೆರೆಸುತ್ತಿದೆ” ಎಂದು ಆಪ್ ಮುಖ್ಯಸ್ಥ ಹಾಗೂ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಜ್ರಿವಾಲ್, “ದೇಶವು ಇದುವರೆಗೆ ಇಂತಹ ಕೊಳಕು ರಾಜಕಾರಣವನ್ನು ನೋಡಿರಲಿಲ್ಲ. ಒಂದು ವೇಳೆ ದಿಲ್ಲಿ ಜನರೇನಾದರೂ ಬಿಜೆಪಿಗೆ ಮತ ಚಲಾಯಿಸದಿದ್ದರೆ, ನೀರಿಗೆ ವಿಷ ಬೆರೆಸಿ ಅವರನ್ನೆಲ್ಲ ಕೊಲ್ಲುತ್ತೀರಾ” ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಹರ್ಯಾಣದಿಂದ ಬರುತ್ತಿರುವ ನೀರಿಗೆ ಅಲ್ಲಿನ ಬಿಜೆಪಿ ಸರಕಾರ ವಿಷ ಬೆರೆಸುತ್ತಿದೆ ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.

ಎಲ್ಲಿಯವರೆಗೆ ಕೇಜ್ರಿವಾಲ್ ಇರುತ್ತಾನೊ, ಅಲ್ಲಿಯವರೆಗೆ ದಿಲ್ಲಿಯ ಜನತೆಗೆ ಯಾವುದೇ ಹಾನಿಯಾಗಲು ಅವಕಾಶ ನೀಡುವುದಿಲ್ಲ ಎಂದು ದಿಲ್ಲಿಯ ಜನತೆಗೆ ನಾನು ಹೇಳಲು ಬಯಸುತ್ತೇನೆ ಎಂದು ಅವರು ಅಭಯ ನೀಡಿದ್ದಾರೆ.

ಇಷ್ಟು ಕೀಳು ಮಟ್ಟಕ್ಕಿಳಿಯಬೇಡಿ ಎಂದೂ ಅವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News