×
Ad

ಕೇರಳ | ಕೆಎಸ್‌ಆರ್‌ಟಿಸಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತ ಪ್ರಯಾಣ ಯೋಜನೆ

Update: 2025-11-02 21:33 IST

   ಸಾಂದರ್ಭಿಕ ಚಿತ್ರ

ತಿರುವನಂತಪುರ, ನ. 2: ಕ್ಯಾನ್ಸರ್ ರೋಗಿಗಳು ಚಿಕಿತ್ಸೆಗಾಗಿ ರಾಜ್ಯದ ಯಾವುದೇ ಆಸ್ಪತ್ರೆಗೆ ತೆರಳಲು ಉಚಿತ ಪ್ರಯಾಣ ಯೋಜನೆಯನ್ನು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ರವಿವಾರ ಘೋಷಿಸಿದೆ.

ಈ ಹಿಂದೆ ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್, ಇಂತಹ ಯೋಜನೆಯನ್ನು ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು.

ಕಿಮೋಥೆರಪಿ, ರೇಡಿಯೇಷನ್ ಹಾಗೂ ಇತರ ಚಿಕಿತ್ಸೆಗಳಿಗೆ ತೆರಳುವ ಕ್ಯಾನ್ಸರ್ ರೋಗಿಗಳು ಸಾಮಾನ್ಯ ಬಸ್‌ನಿಂದ ಸೂಪರ್ ಪಾಸ್ಟ್ ಬಸ್‌ ಗಳ ವರೆಗಿನ ಕೆಎಸ್‌ಆರ್‌ಟಿಸಿ ಬಸ್‌ ಗಳಲ್ಲಿ ಈಗ ಉಚಿತವಾಗಿ ಪ್ರಯಾಣಿಸಬಹುದು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಪ್ರಮೋಜ್ ಶಂಕರ್ ಅಕ್ಟೋಬರ್ 29ರಂದು ಹೊರಡಿಸಿದ ಆದೇಶದಲ್ಲಿ ಹೇಳಿದ್ದಾರೆ.

ಅರ್ಹ ರೋಗಿಗಳು keralartcit.com ಮೂಲಕ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಕಾರ್ಡ್‌ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಪಾಸ್‌ ಪೋರ್ಟ್ ಗಾತ್ರದ ಫೋಟೊ, ಆಧಾರ್ ಕಾರ್ಡ್, ವಿಳಾಸ ಮತ್ತು ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ ಕುರಿತ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು ಎಂದು ಆದೇಶದಲ್ಲಿ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News