×
Ad

ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ಮನ್ನಾಕ್ಕೆ ಕೇಂದ್ರ ಸರಕಾರ ನಿರಾಕರಣೆ : ಕೇರಳ ಹೈಕೋರ್ಟ್ ತರಾಟೆ

‘‘ರಾಜಕೀಯ ಕಾರಣಗಳಿಗಾಗಿ ಸಾಂವಿಧಾನಿಕ ಖಾತರಿಯನ್ನು ನಿರಾಕರಿಸುವಂತಿಲ್ಲ’’: ನ್ಯಾಯಾಲಯ

Update: 2025-10-09 21:48 IST

ಕೇರಳ ಹೈಕೋರ್ಟ್ |  Photo Credi : PTI

ತಿರುವನಂತಪುರ,ಅ. 9: ವಯನಾಡ್ ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡಲು ಇಚ್ಛಾಶಕ್ತಿ ಇಲ್ಲದಿರುವ ಕೇಂದ್ರ ಸರಕಾರವನ್ನು ಕೇರಳ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ.

ಸಂವಿಧಾನದ ಒಕ್ಕೂಟ ತತ್ತ್ವ ನಿರ್ದಿಷ್ಟ ರಾಜ್ಯವೊಂದರ ನಾಗರಿಕರನ್ನು ಭಿನ್ನವಾಗಿ ಪರಿಗಣಿಸಲು ಅವಕಾಶ ನೀಡುವುದಿಲ್ಲ ಎಂದು ಅದು ಹೇಳಿದೆ.

ಈ ಸಾಲವನ್ನು ಮನ್ನಾ ಮಾಡಲು ಯಾವುದೇ ಅವಕಾಶ ಇಲ್ಲ ಎಂಬ ಕೇಂದ್ರ ಸರಕಾರದ ಅಫಿಡವಿಟ್‌ಗೆ ಪ್ರತಿಕ್ರಿಯೆಯಾಗಿ ಡಾ.ಎ.ಕೆ. ಜಯಶಂಕರನ್ ನಂಬಿಯಾರ್ ಹಾಗೂ ಜೋಬಿನ್ ಸೆಬಾಸ್ಟಿಯನ್ ಅವರ ವಿಭಾಗೀಯ ಪೀಠ, ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಜನರ ಮೂಲಭೂತ ಹಕ್ಕುಗಳ ರಕ್ಷಣೆಯ ಸಾಂವಿಧಾನಿಕ ಖಾತರಿಯನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಕಳೆದ ಆಗಸ್ಟ್‌ನಲ್ಲಿ ಉಚ್ಚ ನ್ಯಾಯಾಲಯ ಭೂಕುಸಿತದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ಆರಂಭಿಸಿತ್ತು. ರಾಜ್ಯ, ಕೇಂದ್ರ ಸರಕಾರಗಳು ಹಾಗೂ ಅವುಗಳ ವಿವಿಧ ಇಲಾಖೆಗಳನ್ನು ಪ್ರತಿವಾದಿಯನ್ನಾಗಿ ಮಾಡಿತ್ತು. ಅನಂತರ ನ್ಯಾಯಾಲಯ ಸಾಲ ಮನ್ನಾದ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು.

ಗೃಹ ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ಸಾಲ ಮನ್ನಾಕ್ಕೆ ಅವಕಾಶ ಇಲ್ಲ ಎಂದು ಹೇಳುವುದರ ಜೊತೆಗೆ ಬ್ಯಾಂಕ್‌ಗಳು ತಮ್ಮ ವಾಣಿಜ್ಯ ನಿರ್ಧಾರಗಳಿಗೆ ಶೇರುದಾರರಿಗೆ ಉತ್ತರದಾಯಿ ಆಗಿರುವ ಸ್ವತಂತ್ರ್ಯ ಸಂಸ್ಥೆಗಳಾಗಿವೆ. ಹಣಕಾಸು ಸಚಿವಾಲಯ ನೀತಿ ಬೆಂಬಲವನ್ನು ಮಾತ್ರ ನೀಡುತ್ತದೆ ಮತ್ತು ಆಡಳಿತಾತ್ಮಕ ವಿಷಯಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದೆ.

ಕೇಂದ್ರ ಸರಕಾರ ಸಾಲ ಮನ್ನಾ ಮಾಡದಂತೆ ಬ್ಯಾಂಕ್‌ಗಳನ್ನು ಕೇಳಲು ಯೋಜಿಸದೇ ಇರುವುದು ದುರಾದೃಷ್ಟಕರ. ಭೂಕುಸಿತದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ಕೇಂದ್ರ ಸರಕಾರ ಬಯಸುವುದಿಲ್ಲ ಎಂದು ಅಫಿಡವಿಟ್ ಬಹಿರಂಗಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ.

ತೀವ್ರ ಪ್ರಾಕೃತಿಕ ವಿಕೋಪದ ಅಸಹಾಯಕ ಸಂತ್ರಸ್ತರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕೇಂದ್ರ ಸರಕಾರ ಸಾಂವಿಧಾನಿಕವಾಗಿ ಜವಬ್ದಾರಿಯುತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಬದ್ಧವಾಗಿದೆ ಎಂದು ನಾವು ಭಾವಿಸಿದ್ದೇವೆ ಎಂದು ಪೀಠ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News