×
Ad

ದೇವಸ್ಥಾನದ ಆವರಣದಲ್ಲಿ ಆರೆಸ್ಸೆಸ್ ಕವಾಯತು, ಶಸ್ತ್ರಾಸ್ತ್ರ ತರಬೇತಿ ರದ್ದುಪಡಿಸಿದ ಕೇರಳ ಹೈಕೋರ್ಟ್

Update: 2023-09-12 11:59 IST

Photo: PTI

ಕೊಚ್ಚಿ: ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ನಿರ್ವಹಣೆ ಮಾಡುತ್ತಿರುವ ತಿರುವನಂತಪುರಂ ಜಿಲ್ಲೆಯ ಸರ್ಕಾರಾದೇವಿ ದೇವಸ್ಥಾನದ ಆವರಣದಲ್ಲಿ ಯಾವುದೇ ಸಾಮೂಹಿಕ ಕವಾಯತು ಅಥವಾ ಶಸ್ತ್ರಾಸ್ತ್ರ ತರಬೇತಿ ನೀಡಬಾರದು ಎಂದು ಕೇರಳ ಹೈಕೋರ್ಟ್ ಆದೇಶಿಸಿದೆ

ಆರೆಸ್ಸೆಸ್ ಹಾಗೂ ಅದರ ಸದಸ್ಯರು ದೇವಸ್ಥಾನದ ಆವರಣದ "ಅಕ್ರಮ ಹಾಗೂ ಅನಧಿಕೃತ ಬಳಕೆ" ತಡೆಯುವ ಆದೇಶ ನೀಡುವಂತೆ ಕೋರಿ ಇಬ್ಬರು ಭಕ್ತರು ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡುವಾಗ ಈ ನಿರ್ದೇಶನ ಹೈಕೋರ್ಟ್ ನಿಂದ ಬಂದಿದೆ

ಮಂಡಳಿಯಿಂದ ನಿರ್ವಹಿಸಲ್ಪಡುವ ದೇಗುಲಗಳಲ್ಲಿ ಆರೆಸ್ಸೆಸ್ ಶಾಖೆಗಳು ಹಾಗೂ ಸಾಮೂಹಿಕ ಕವಾಯತುಗಳನ್ನು ನಿಷೇಧಿಸುವ ಹಿಂದಿನ TDB ಆದೇಶದ ಅನುಸರಣೆಗೆ ಕಟ್ಟುನಿಟ್ಟಿನ ಅಗತ್ಯ ನೆರವು ನೀಡುವಂತೆ ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ.

“ತಿರುವಾಂಕೂರು ದೇವಸ್ವಂ ಮಂಡಳಿಯ ನಿರ್ವಹಣೆಯಲ್ಲಿರುವ ದೇವಸ್ಥಾನದಲ್ಲಿ "ಯಾವುದೇ ಸಾಮೂಹಿಕ ಕವಾಯತು ಅಥವಾ ಶಸ್ತ್ರಾಸ್ತ್ರ ಅಭ್ಯಾಸಗಳನ್ನು ದೇಗುಲದ ಆವರಣದಲ್ಲಿ ಅನುಮತಿಸಲಾಗುವುದಿಲ್ಲ ಚಿರಾಯಿಂಕೀಝು ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಕಟ್ಟುನಿಟ್ಟಾದ ನಿರ್ಬಂಧದ ಪಾಲನೆಯನ್ನು ಖಚಿತಪಡಿಸಿಕೊಳ್ಳಲು ಆಡಳಿತ ಅಧಿಕಾರಿಗೆ ಸಹಾಯ ಮಾಡಬೇಕು '' ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ. ನರೇಂದ್ರನ್ ಮತ್ತು ಪಿ. ಜಿ. ಅಜಿತ್ ಕುಮಾರ್ ಇತ್ತೀಚಿನ ಆದೇಶದಲ್ಲಿ ತಿಳಿಸಿದ್ದಾರೆ.

ಕೇರಳದ ದೇವಾಲಯಗಳನ್ನು ನಿರ್ವಹಿಸುವ ಟಿಡಿಬಿ ಮೇ 18 ರಂದು ಹೊಸ ಸುತ್ತೋಲೆ ಹೊರಡಿಸಿತ್ತು.

ತನ್ನ ವ್ಯಾಪ್ತಿಗೆ ಬರುವ ದೇಗುಲಗಳಲ್ಲಿ ಆರೆಸ್ಸೆಸ್ 'ಶಾಖಾ'ಗಳನ್ನು (ಶಾಖೆಗಳು) ನಿಷೇಧಿಸುವ ಅದರ ಹಿಂದಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿತ್ತು.

2021 ರ ಆದೇಶವನ್ನು ಅನುಸರಿಸಲು ಯಾರು ನಿರಾಕರಿಸುತ್ತಾರೋ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆ ಸುತ್ತೋಲೆಯಲ್ಲಿ ಟಿಡಿಬಿ ತಿಳಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News