Kerala Local Body Election Result: ಶಶಿ ತರೂರ್ ಭದ್ರಕೋಟೆಯಲ್ಲಿ ಅರಳಿದ ಕಮಲ: ತಿರುವನಂತಪುರಂ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ
Photo credit: indiatoday.in
ತಿರುವನಂತಪುರಂ: ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಎನ್‌ಡಿಎ ಗೆಲುವನ್ನು ಸಾಧಿಸಿದೆ. ಆಡಳಿತರೂಢ ಎಲ್‌ಡಿಎಫ್‌ನಿಂದ ತ್ರಿಪುನಿತುರ ಪುರಸಭೆಯನ್ನು ವಶಪಡಿಸಿಕೊಂಡಿದೆ.
ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಪ್ರತಿನಿಧಿಸುವ ಸಂಸದೀಯ ಕ್ಷೇತ್ರದಲ್ಲಿ ಬರುವ ತಿರುವನಂತಪುರಂ ಮಹಾನಗರ ಪಾಲಿಕೆಯು ಬಹಳ ಹಿಂದಿನಿಂದಲೂ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಥವಾ ಎಲ್‌ಡಿಎಫ್ ಪ್ರಾಬಲ್ಯವನ್ನು ಹೊಂದಿತ್ತು.
ಎನ್‌ಡಿಎ ಪಾಲಕ್ಕಾಡ್ ಪುರಸಭೆಯಲ್ಲೂ ಮೇಲುಗೈ ಸಾಧಿಸಿದೆ. ಬಿಜೆಪಿ 25 ಸ್ಥಾನಗಳೊಂದಿಗೆ ಪಾಲಕ್ಕಾಡ್ ಪುರಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಯುಡಿಎಫ್ 18 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದು, ಎಲ್‌ಡಿಎಫ್ 9 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.
ಕೇರಳ ರಾಜಕೀಯದಲ್ಲಿ ನೆಲೆಯನ್ನು ಪಡೆಯಲು ಹೆಣಗಾಡುತ್ತಿರುವ ಬಿಜೆಪಿಗೆ ಈ ಗೆಲುವು ಮಹತ್ವಪೂರ್ಣವಾಗಿದೆ.