×
Ad

ಖಾಮಿನೈ ಹಾಗೂ ಇತರ ಉನ್ನತ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ: ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ

"ಹೊರಗಿನ ಸಹಾಯವಿಲ್ಲದೆ ತನ್ನನ್ನು ರಕ್ಷಿಸಿಕೊಳ್ಳಲು ಇರಾನ್ ಸಮರ್ಥವಾಗಿದೆ"

Update: 2026-02-28 21:52 IST

ಅಬ್ಬಾಸ್ ಅರಾಘ್ಚಿ | Photo Credit : AP , PTI 

ಟೆಹ್ರಾನ್: ಇರಾನ್‍ಗೆ ತನ್ನ ಭದ್ರತೆಗಾಗಿ ಬಾಹ್ಯ ನೆರವು ಅಗತ್ಯವಿಲ್ಲ. ಹೊರಗಿನ ಸಹಾಯವಿಲ್ಲದೆ ತನ್ನನ್ನು ರಕ್ಷಿಸಿಕೊಳ್ಳಲು ಸಮರ್ಥವಾಗಿದೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

ಪ್ರಸ್ತುತ ಎದುರಾಗಿರುವ ಆಕ್ರಮಣದ ಅಲೆಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳಲು ದೇಶವು ಸಾಕಷ್ಟು ಸಮರ್ಥವಾಗಿದೆ. ನಮಗೆ ಯಾರ ನೆರವಿನ ಅಗತ್ಯವೂ ಇಲ್ಲ. ಇರಾನ್ ಕೆಲವು ಕಮಾಂಡರ್‍ಗಳನ್ನು ಕಳೆದುಕೊಂಡಿರಬಹುದು. ಆದರೆ ಅದು ದೊಡ್ಡ ಸಮಸ್ಯೆಯೇನಲ್ಲ. ದೇಶದ ಸರ್ವೋಚ್ಛ ನಾಯಕ ಆಯತುಲ್ಲಾ ಆಲಿ ಖಾಮಿನೈ ಹಾಗೂ ಇತರ ಉನ್ನತ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಮತ್ತು ನಾವು ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸುತ್ತಿದ್ದೇವೆ ಎಂದವರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News