×
Ad

Assam | ಪಾಕ್‌ ಗುಪ್ತಚರರೊಂದಿಗೆ ಸಂಪರ್ಕ ಆರೋಪ, ನಿವೃತ್ತ ಐಎಎಫ್ ಸಿಬ್ಬಂದಿ ಕುಳೇಂದ್ರ ಶರ್ಮಾ ಬಂಧನ

Update: 2025-12-13 21:31 IST

 ಕುಳೇಂದ್ರ ಶರ್ಮಾ | Photo Credit  : X

ತೇಜಪುರ,ಡಿ.13: ಪಾಕಿಸ್ತಾನದ ಗುಪ್ತಚರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ನಿವೃತ್ತ ಸಿಬ್ಬಂದಿ ಕುಳೇಂದ್ರ ಶರ್ಮಾ ನನ್ನು ಅಸ್ಸಾಮಿನ ಸೋನಿತ್‌ಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೋಲಿಸರು ಶನಿವಾರ ತಿಳಿಸಿದರು.

ಆರೋಪಿಯ ಕುಳೇಂದ್ರ ಶರ್ಮಾ ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕ್ ಏಜೆಂಟ್‌ ಗಳೊಂದಿಗೆ ಸೂಕ್ಷ್ಮ ದಾಖಲೆಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡಿದ್ದು ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಆತನ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಕೆಲವು ಡೇಟಾವನ್ನು ಅಳಿಸಲಾಗಿದ್ದರೂ ಈ ಸಾಧನಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್‌ಪಿ ಹರಿಚರಣ ಭೂಮಿಜ್ ಅವರು ಸುದ್ದಿಗಾರರಿಗೆ ತಿಳಿಸಿದರು. ಬಿಎನ್‌ಎಸ್‌ನ ಸಂಬಂಧಿತ ಕಲಮ್‌ ಗಳಡಿ ಕುಳೇಂದ್ರ ಶರ್ಮಾ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News