×
Ad

ಮುಂದುವರಿದ ಪ್ರತಿಭಟನೆ: ಇರಾನ್‌ ತೊರೆಯುವಂತೆ ಭಾರತೀಯ ಪ್ರಜೆಗಳಿಗೆ ರಾಯಭಾರಿ ಕಚೇರಿ ಸಲಹೆ

Update: 2026-01-14 16:26 IST

Photo credit: PTI

ಹೊಸದಿಲ್ಲಿ: ಇರಾನ್‌ನಲ್ಲಿ ಪ್ರಾದೇಶಿಕ ಉದ್ವಿಗ್ನತೆ ಮತ್ತು ಪ್ರತಿಭಟನೆ ಹೆಚ್ಚುತ್ತಿರುವ ಬೆನ್ನಲ್ಲೆ ಭಾರತೀಯ ಪ್ರಜೆಗಳು ದೇಶವನ್ನು ತೊರೆಯುವಂತೆ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಲಹೆಯನ್ನು ನೀಡಿದೆ.

2025ರ ಜನವರಿ 5ರಂದು ಭಾರತ ಸರಕಾರ ಹೊರಡಿಸಿದ ಸಲಹೆಯ ಮುಂದುವರಿದ ಭಾಗವಾಗಿ ಮತ್ತು ಇರಾನ್‌ನಲ್ಲಿನ ಬದಲಾಗುತ್ತಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ಇರಾನ್‌ನಲ್ಲಿರುವ ವಿದ್ಯಾರ್ಥಿಗಳು, ಯಾತ್ರಿಕರು, ವ್ಯಾಪಾರಸ್ಥರು, ಪ್ರವಾಸಿಗರು ಸೇರಿದಂತೆ ಭಾರತೀಯ ಪ್ರಜೆಗಳು ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಇರಾನ್ ತೊರೆಯುವಂತೆ ಸಲಹೆ ನೀಡಲಾಗಿದೆ.

ಇರಾನ್‌ನಲ್ಲಿ ಪ್ರತಿಭಟನೆ ಮತ್ತು ಉದ್ವಿಗ್ನತೆಯ ಹೆಚ್ಚಳ ಮತ್ತು ಅಮೆರಿಕದ ಮಿಲಿಟರಿ ಕ್ರಮದ ಬೆದರಿಕೆ ಬೆನ್ನಲ್ಲೆ ಈ ಸಲಹೆಯನ್ನು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News