×
Ad

ಸಂಕ್ರಾಂತಿ ಹಬ್ಬಕ್ಕೆ ಗಗನಕ್ಕೇರಿದ ಚಿನ್ನ-ಬೆಳ್ಳಿ; ಇಂದಿನ ಚಿನ್ನದ ದರವೆಷ್ಟು?

Update: 2026-01-14 12:29 IST

ಸಾಂದರ್ಭಿಕ ಚಿತ್ರ (AI)

ಸಂಕ್ರಾಂತಿಯಂದು ಎಳ್ಳು-ಬೆಲ್ಲದ ಜೊತೆಗೆ ಆಭರಣಗಳನ್ನು ಖರೀದಿಸುವುದು ಕೂಡ ಸಂಪ್ರದಾಯವಾಗಿದೆ. ಹೀಗಾಗಿ ಜನರು ಆಭರಣ ಅಂಗಡಿಗಳಿಗೆ ಮುಗಿ ಬೀಳುವ ನಿರೀಕ್ಷೆಯಲ್ಲಿ ದರ ವಿಪರೀತ ಏರಿಕೆ ಕಂಡಿದೆ.

ಸಂಕ್ರಾಂತಿ ಹಬ್ಬದ ಸಡಗರದ ನಡುವೆ ಇಂದು ಬುಧವಾರ ಚಿನ್ನ ಮತ್ತೆ ವಿಪರೀತ ಏರಿಕೆ ಕಂಡಿದೆ. ಹಬ್ಬದ ದಿನದಂದು ಭಾರೀ ಏರಿಕೆ ಕಂಡು ಖರೀದಿದಾರರಿಗೆ ಆಘಾತ ತಂದಿದೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲದ ಜೊತೆಗೆ ಆಭರಣಗಳನ್ನು ಕೊಳ್ಳುವುದು ಕೂಡ ಸಂಪ್ರದಾಯವಾಗಿದೆ. ಹೀಗಾಗಿ ಜನರು ಆಭರಣ ಅಂಗಡಿಗಳಿಗೆ ಮುಗಿ ಬೀಳುವ ನಿರೀಕ್ಷೆಯಲ್ಲಿ ದರ ವಿಪರೀತ ಏರಿಕೆ ಕಂಡಿದೆ.

ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?

ಬುಧವಾರ ಜನವರಿ 14ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,362 (+109) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,165 (+100) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,772 (+82) ರೂ. ಬೆಲೆಗೆ ತಲುಪಿದೆ.

ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ?

ರಾಜ್ಯದಲ್ಲಿ ಒಂದು ಗ್ರಾಂನ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 14,254 ರೂ. ಗೆ ತಲುಪಿದೆ. 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ –13,066 ರೂ. ಮತ್ತು 18 ಕ್ಯಾರೆಟ್ ಆಭರಣ ಚಿನ್ನದ ಬೆಲೆ 10,691 ರೂ.ಗಳಿಗೆ ತಲುಪಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಪ್ರತೀ ಗ್ರಾಂ ಚಿನ್ನದ ಬೆಲೆಯಲ್ಲಿ 109 ರೂ. ಏರಿಕೆ ಕಂಡಿದೆ. ಅಂದ್ರೆ ಒಂದು ಗ್ರಾಂ ಬೆಲೆ 14,362 ರೂ. ಆಗಿದ್ದು, ಮಂಗಳವಾರ 14,253 ರೂ. ಇತ್ತು. 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,165 ರೂ. ಆಗಿದ್ದು, ಮಂಗಳವಾರ 13,065 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 100 ರೂ. ಹೆಚ್ಚಳವಾಗಿದೆ. 18 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ಇಂದು 10,772 ರೂ. ಆಗಿದ್ದು, ಮಂಗಳವಾರ 10,690 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 82 ರೂ. ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 1,42,540 ರೂ. ಗಳಿಗೆ ಏರಿದೆ. 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ 1,30,660 ರೂ. ಗಳಿಗೆ ಏರಿದೆ. ಬೆಳ್ಳಿ ಬೆಲೆ 1 ಕೆಜಿಗೆ 2,57,900 ರೂ. ಗೆ ಏರಿದೆ.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ

ಚೆನ್ನೈ 13,171 ರೂ.

ಮುಂಬೈ 13,066 ರೂ.

ದಿಲ್ಲಿ 13,081 ರೂ.

ಕೋಲ್ಕತ್ತಾ 13,066 ರೂ.

ಹೈದರಾಬಾದ್ 13,066 ರೂ.

ಕೇರಳ 13,066 ರೂ.

ಪುಣೆ 13,066 ರೂ.

ಬೆಳ್ಳಿಯ ಬೆಲೆಯಲ್ಲೂ ಏರಿಕೆ

ಈ ವರ್ಷವಂತೂ ಬೆಳ್ಳಿ ಕೂಡಾ ಸುರಕ್ಷಿತ ಹೂಡಿಕೆಯಾಗಿ ಬದಲಾಗುತ್ತಿದೆ. ಏಕೆಂದರೆ ಬೆಳ್ಳಿ ಬೆಲೆ ದಿನೇ ದಿನೇ ಭಾರೀ ಏರಿಕೆ ಕಾಣುತ್ತಿದೆ. ಜನವರಿ 14, 2026ರ ಮನಿ ಕಂಟ್ರೋಲ್‌ ವರದಿ ಪ್ರಕಾರ, ಮಲ್ಟಿ-ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (MCX) ಬೆಳ್ಳಿ ದರ ಹಿಂದಿನ ವಹಿವಾಟಿಗಿಂತಲೂ ಏರಿಕೆ ಕಂಡಿದೆ. ಭಾರತೀಯ ಸಮಯ 10:07 ರ ಹೊತ್ತಿಗೆ ಪ್ರತೀ ಕೆಜಿಗೆ ಇಂದು 2,86,901 ಲಕ್ಷ ರೂ. ತಲುಪಿದೆ. ಅಂದರೆ ಹಿಂದಿನ ವಹಿವಾಟಿಗೆ ಹೋಲಿಸಿದರೆ ಶೇ. 4.22ರಷ್ಟು ಏರಿಕೆ ಕಂಡಿದೆ.

ಭಾರತದಲ್ಲಿ 1 ಗ್ರಾಂ ಬೆಳ್ಳಿ ದರ ಇಂದು 290 ರೂ. ಆಗಿದ್ದು, ಮಂಗಳವಾರ 275 ರೂ. ಇತ್ತು. ನಿನ್ನೆಗಿಂತ ಇಂದು ಒಂದೇ ದಿನ ಪ್ರತೀ ಗ್ರಾಂನಲ್ಲಿ 15 ರೂ. ಏರಿಕೆ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News