×
Ad

ಉತ್ತರ ಪ್ರದೇಶ | ಸಂಭಾಲ್‌ನಲ್ಲಿ ಅಕ್ರಮ ಕಟ್ಟಡವೆಂದು ಮಸೀದಿಯ ಕೆಲ ಭಾಗಗಳನ್ನು ಕೆಡವಿದ ಜಿಲ್ಲಾಡಳಿತ

Update: 2025-10-03 14:17 IST

Photo | indiatoday

ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಅತಿಕ್ರಮಣದ ಆರೋಪದ ಮೇಲೆ ಜಿಲ್ಲಾಡಳಿತ ಮಸೀದಿಯೊಂದರ ವಿವಾಹ ಸಭಾಂಗಣ ಮತ್ತು ಮದ್ರಸಾವನ್ನು ನೆಲಸಮಗೊಳಿಸಿರುವ ಘಟನೆ ನಡೆದಿದೆ.

ಪ್ರಾಧಿಕಾರಗಳ ಪ್ರಕಾರ, ಅಸ್ಮೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ ಗ್ರಾಮದಲ್ಲಿ ಮೀಸಲು ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

"ಮೀಸಲು ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮಸೀದಿ ಸೇರಿದಂತೆ ವಿವಾಹ ಸಭಾಂಗಣದ ನೆಲಸಮಕ್ಕೆ ನ್ಯಾಯಾಲಯ ಆದೇಶಿಸಿತ್ತು. ಈ ಕುರಿತು ಎರಡು ಬಾರಿ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿತ್ತು. ಅವರು ವಿಚಾರಣೆಗೆ ಹಾಜರಾದರೂ, ಮಾಲಕತ್ವದ ದಾಖಲೆಗಳನ್ನು ಸಲ್ಲಿಸುವಲ್ಲಿ ವಿಫಲರಾದರು. ಬಳಿಕ 30 ದಿನಗಳ ಗಡುವಿನ ಅವಧಿಯೊಂದಿಗೆ ಸೆಪ್ಟೆಂಬರ್ 2ರಂದು ನೆಲಸಮಗೊಳಿಸಲು ಆದೇಶಿಸಲಾಗಿತ್ತು ಎಂದು ತಹಶೀಲ್ದಾರ್ ಧೀರೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಈ ನಡುವೆ ಜಿಲ್ಲೆಯಾದ್ಯಂತ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News