ಮಧ್ಯಪ್ರದೇಶ | ಸೇನಾ ಪ್ರದೇಶದ ಫೋಟೊ ತೆಗೆಯಲು ಯತ್ನ; ಇಬ್ಬರು ಯುವಕರ ಬಂಧನ
Update: 2025-05-10 20:57 IST
PC : File image
ಭೋಪಾಲ್: ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ನಡುವೆ ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಸೇನಾ ಪ್ರದೇಶದಿಂದ ಶುಕ್ರವಾರ ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅವರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಸೇನಾ ಪ್ರದೇಶದ ಫೋಟೊಗಳನ್ನು ತೆಗೆಯುತ್ತಿದ್ದರು ಎಂದು ಆರೋಪಿಸಲಾಗಿದೆ. ನಿರ್ಬಂಧಿತ ಪ್ರದೇಶದಲ್ಲಿ ಅವರ ಸಂದೇಹಾಸ್ಪದ ಚಟುವಟಿಕೆಗಳನ್ನು ಗಮನಿಸಿದ ಬಳಿಕ ಯೋಧರು ಅವರನ್ನು ವಶಕ್ಕೆ ತೆಗೆದುಕೊಂಡರು.
ಶಂಕಿತರನ್ನು ಅಯೇಷಾ ನಗರದ ಖಾಜ್ರಿ ಬೈಪಾಸ್‌ನ ನಿವಾಸಿ ಮುಹಮ್ಮದ್ ಝುಬೇರ್ ಹಾಗೂ ನ್ಯೂ ಆನಂದ್ ನಗರ್‌ನ ನಿವಾಸಿ ಮುಹಮ್ಮದ್ ಇರ್ಫಾನ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವಿಚಾರಣೆ ಬಳಿಕ ಇಬ್ಬರನ್ನೂ ಗೋರಾ ಬಝಾರ್ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.