ಮಧ್ಯಪ್ರದೇಶ| ಕಾರು- ಟ್ರಕ್‌ಗೆ ಢಿಕ್ಕಿ: ಮಾಜಿ ಸಚಿವರ ಪುತ್ರಿ ಸೇರಿ ಮೂವರು ಮೃತ್ಯು
Update: 2026-01-09 17:52 IST
Photo credit: newindianexpress
ಭೋಪಾಲ್: ಇಂದೋರ್‌ನಲ್ಲಿ ಕಾರು ಟ್ರಕ್‌ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಅವರ ಪುತ್ರಿ ಪ್ರೇರಣಾ ಬಚ್ಚನ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಮಾಜಿ ಗೃಹ ಸಚಿವ ಬಾಲಾ ಬಚ್ಚನ್ ಅವರ ಪುತ್ರಿ ಪ್ರೇರಣಾ, ಕಾಂಗ್ರೆಸ್ ರಾಜ್ಯ ವಕ್ತಾರ ಆನಂದ್ ಕಸ್ಲಿವಾಲ್ ಅವರ ಪುತ್ರ ಪ್ರಖರ್ ಕಸ್ಲಿವಾಲ್ ಮತ್ತು ಕಾರಿನಲ್ಲಿದ್ದ ಮೂರನೇ ವ್ಯಕ್ತಿ ಮನಾ ಸಂಧು ಮೃತಪಟ್ಟಿದ್ದಾರೆ. ಅನುಷ್ಕಾ ರಥಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದೋರ್‌ನ ರಾಲಮಂಡಲ್ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 5.15ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪೊಲೀಸರ ಪ್ರಕಾರ, ಪ್ರೇರಣಾ, ಪ್ರಖರ್, ಮಾನಾ ಮತ್ತು ಅನುಷ್ಕಾ ಅವರು ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಟ್ರಕ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.