×
Ad

ಮಧ್ಯಪ್ರದೇಶ | ತರಬೇತಿ ವಿಮಾನ ಪತನ ; ಇಬ್ಬರು ಪೈಲಟ್‌ಗಳಿಗೆ ಗಾಯ

Update: 2024-08-11 22:35 IST

ಗುನಾ : ಖಾಸಗಿ ವಿಮಾನ ಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವೊಂದು ಮಧ್ಯಪ್ರದೇಶದ ಗುನಾ ಜಿಲ್ಲೆಯ ಏರ್‌ಸ್ಟ್ರಿಪ್‌ನಲ್ಲಿ ರವಿವಾರ ಪತನಗೊಂಡಿದೆ. ಅದರಲ್ಲಿದ್ದ ಇಬ್ಬರು ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಆಸನಗಳ ವಿಮಾನ ಅಪರಾಹ್ನ ಸುಮಾರು 1.30ಕ್ಕೆ ಪತನಗೊಂಡಿತು. ಸುಮಾರು 40 ನಿಮಿಷಗಳ ಹಾರಾಟದ ಬಳಿಕ ಎಂಜಿನ್ ವೈಫಲ್ಯದಿಂದ ವಿಮಾನ ಪತನಗೊಂಡಿರುವ ಸಾಧ್ಯತೆ ಇದೆ ಎಂದು ಗುನಾ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಉಸ್ತುವಾರಿ ದಿಲೀಪ್ ರಾಜೋರಿಯಾ ತಿಳಿಸಿದ್ದಾರೆ.

ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳಿಗೆ ಗಾಯಗಳಾಗಿವೆ. ಆದರೆ, ಅವರು ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಇಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಮಾನ ಕೆಲವು ದಿನಗಳ ಹಿಂದೆ ಪರೀಕ್ಷೆ ಹಾಗೂ ನಿರ್ವಹಣೆಗೆ ಇಲ್ಲಿಗೆ ಆಗಮಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News