×
Ad

ಆಟೋ ಚಾಲಕನಿಗೆ ಥಳಿಸಿ ʼಜೈ ಶ್ರೀರಾಮ್‌ʼ ಹೇಳಲು ಬಲವಂತಪಡಿಸಿದ ಕಿಡಿಗೇಡಿಗಳು: ಓರ್ವನ ಬಂಧನ

Update: 2024-02-17 17:22 IST

Photo: siasat.com

ಮುಂಬೈ: ಥಾಣೆ ಜಿಲ್ಲೆಯ ಮುಂಬ್ರ ಎಂಬಲ್ಲಿ ಆಟೋ ಚಾಲಕರೊಬ್ಬರಿಗೆ ಥಳಿಸಿ ನಂತರ ʼಜೈ ಶ್ರೀರಾಮ್‌ʼ ಎಂದು ಹೇಳಲು ಗುಂಪೊಂದು ಬಲವಂತಪಡಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇತರ ನಾಲ್ಕು ಮಂದಿ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಶುಕ್ರವಾರ ತಡರಾತ್ರಿ ಘಟನೆ ನಡೆದಿದೆ. ಚಾಲಕ ಮುಹಮ್ಮದ್‌ ಸಾಜಿದ್‌ ಮೊಹಮ್ಮದ್‌ ಯಾಸೀನ್‌ ಖಾನ್‌ ನೀಡಿದ ದೂರಿನ ಪ್ರಕಾರ, ಐದು ಮಂದಿ ಅವರ ಮೇಲೆ ಹಲ್ಲೆ ನಡೆಸಿ, ರೂ. 2000 ಸೆಳೆದು ನಂತರ ಜೈ ಶ್ರೀ ರಾಮ್‌ ಹೇಳಲು ಬಲವಂತಪಡಿಸಿದ್ದರು ಎಂದು ಆರೋಪಿಸಿದ್ದಾರೆ.

ಥಾಣೆಯ ದೈಗರ್‌ ಠಾಣೆಯಲ್ಲಿ ಐದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ 395, 295-ಎ ಅನ್ವಯ ಮತ್ತು ರೂ. 50 ರಷ್ಟು ಮೌಲ್ಯದ ವಸ್ತುಗೆ ಹಾನಿಗೈದ ಆರೋಪ ಹೊರಿಸಿ ಸೆಕ್ಷನ್‌ 427 ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಇಂತಹುದೇ ಎರಡು ಪ್ರತ್ಯೇಕ ಘಟನೆಗಳಲ್ಲಿ ಪರ್ಭಾನಿ ಜಿಲ್ಲೆಯಲ್ಲಿ ಇಬ್ಬರು ಮುಸ್ಲಿಂ ಯುವಕರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಕಿರುಕುಳ ನೀಡಿ ಹಲ್ಲೆಗೈದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News