×
Ad

ಮಹಾರಾಷ್ಟ್ರ ಚುನಾವಣೆ | ಏಕನಾಥ ಶಿಂದೆ ನಾಮಪತ್ರ ಸಲ್ಲಿಕೆ

Update: 2024-10-28 21:04 IST

 ಏಕನಾಥ ಶಿಂದೆ |  PTI

ಥಾಣೆ : ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ನ.20ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಸೋಮವಾರ ಥಾಣೆಯ ಕೋಪ್ರಿ-ಪಚ್‌ ಪಾಖಡಿ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಿದರು.

ಇದಕ್ಕೂ ಮುನ್ನ ಅವರು ಆನಂದ ಆಶ್ರಮದಲ್ಲಿ ತನ್ನ ರಾಜಕೀಯ ಗುರು ದಿ.ಆನಂದ ದಿಘೆಯವರಿಗೆ ಗೌರವಾರ್ಪಣೆಯ ಬಳಿಕ ರೋಡ್‌ಶೋ ನಡೆಸಿದರು.

ಶಿಂದೆ ತನ್ನ ತವರು ಕ್ಷೇತ್ರದಲ್ಲಿ ಶಿವಸೇನೆ(ಯುಬಿಟಿ) ಅಭ್ಯರ್ಥಿ ಹಾಗೂ ಆನಂದ ದಿಘೆಯವರ ಸೋದರಪುತ್ರ ಕೇದಾರ ದಿಘೆಯವರನ್ನು ಎದುರಿಸಲಿದ್ದಾರೆ.

ಶಿವಸೇನೆ ಮತ್ತು ಎನ್‌ಸಿಪಿಯ ಪ್ರಮುಖ ನಾಯಕರು ಮತ್ತು ಕೇಂದ್ರ ಸಚಿವ ರಾಮದಾಸ ಅಠಾವಳೆ(ಆರ್‌ಪಿಐ-ಎ) ಅವರು ಶಿಂದೆಯವರ ಜೊತೆಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News