ಹಿಂದುತ್ವ ಗುಂಪಿನ ಒತ್ತಡಕ್ಕೆ ಮಣಿದ ಮಹಾರಾಷ್ಟ್ರ ಸರಕಾರ: ಇಸ್ಲಾಮ್‌ಪುರಕ್ಕೆ ಈಶ್ವರಪುರ ಎಂದು ಮರುನಾಮಕರಣ
ಛಗನ್ ಭುಜಬಲ್ | PTI
ಮುಂಬೈ: ಸಾಂಗ್ಲಿ ಜಿಲ್ಲೆಯ ಇಸ್ಲಾಮ್‌ಪುರವನ್ನು ಈಶ್ವರಪುರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಮಹಾರಾಷ್ಟ್ರ ಸರಕಾರವು ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಪ್ರಕಟಿಸಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವಿಧಾನಸಭೆಯಲ್ಲಿ ತಿಳಿಸಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಛಗನ್ ಭುಜಬಲ್ ಅವರು,ರಾಜ್ಯ ಸರಕಾರವು ಸಂಪುಟ ನಿರ್ಧಾರವನ್ನು ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಿದೆ ಎಂದು ಹೇಳಿದರು.
ಇಸ್ಲಾಮ್‌ಪುರದ ಹೆಸರನ್ನು ಈಶ್ವರಪುರ ಎಂದು ಬದಲಿಸುವಂತೆ ಆಗ್ರಹಿಸಿ ಹಿಂದುತ್ವ ಸಂಘಟನೆ ಶಿವ ಪ್ರತಿಷ್ಠಾನವು ಸಾಂಗ್ಲಿ ಜಿಲ್ಲಾಡಳಿತಕ್ಕೆ ಅಹವಾಲು ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಸಂಭಾಜಿ ಭಿಡೆ ಶಿವ ಪ್ರತಿಷ್ಠಾನದ ಮುಖ್ಯಸ್ಥರಾಗಿದ್ದು,ತಮ್ಮ ಬೇಡಿಕೆ ಈಡೇರುವವರೆಗೂ ವಿರಮಿಸುವುದಿಲ್ಲ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.
ಹೆಸರು ಬದಲಾವಣೆಗಾಗಿ ಬೇಡಿಕೆ 1986ರಿಂದಲೂ ಬಾಕಿಯುಳಿದಿತ್ತು ಎಂದು ಇಸ್ಲಾಮ್‌ಪುರದ ಶಿವಸೇನಾ ನಾಯಕರೋರ್ವರು ತಿಳಿಸಿದರು.