×
Ad

ಕಾಮಗಾರಿಗಳ 89,000 ಕೋಟಿ ರೂ. ಬಾಕಿ: ಮಹಾರಾಷ್ಟ್ರ ಸರಕಾರವನ್ನು ನ್ಯಾಯಾಲಯಕ್ಕೆಳೆಯಲು ಗುತ್ತಿಗೆದಾರರ ನಿರ್ಧಾರ

Update: 2025-04-20 16:02 IST

ಸಾಂದರ್ಭಿಕ ಚಿತ್ರ | PC : freepik.com

ಮುಂಬೈ: ರಾಜ್ಯದಲ್ಲಿ ಮೂಲಸೌಕರ್ಯ ಕಾಮಗಾರಿಗಳ ಬಾಬ್ತು 89,000 ಕೋಟಿ ರೂ.ಗಳ ಬಿಲ್‌ಗಳನ್ನು ಬಾಕಿಯುಳಿಸಿಕೊಂಡಿರುವ ಮಹಾರಾಷ್ಟ್ರ ಸರಕಾರದ ವಿರುದ್ಧ ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲೇರಲು ರಾಜ್ಯದ ಗುತ್ತಿಗೆದಾರರು ಸಜ್ಜಾಗಿದ್ದಾರೆ. ಮುಂಬೈ,ನಾಗ್ಪುರ ಮತ್ತು ಛತ್ರಪತಿ ಸಂಭಾಜಿ ನಗರಗಳಲ್ಲಿಯ ಹೈಕೋರ್ಟ್ ಪೀಠಗಳ ಮುಂದೆ ಅರ್ಜಿಗಳನ್ನು ಸಲ್ಲಿಸುವುದಾಗಿ ಗುತ್ತಿಗೆದಾರರ ಸಂಘವು ಪ್ರಕಟಿಸಿದೆ.

‘ರಾಜ್ಯ ಸರಕಾರದಿಂದ ನಮಗೆ ಬಾಕಿಯಿರುವ ಮೊತ್ತ ಸುಮಾರು 89,000 ಕೋಟಿ ರೂ.ಗಳಾಗಿದ್ದರೂ,ಅದು ಕೇವಲ 4,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮಹಾರಾಷ್ಟ್ರ ರಾಜ್ಯ ಗುತ್ತಿಗೆದಾರರ ಸಂಘ ಮತ್ತು ರಾಜ್ಯ ಇಂಜಿನಿಯರ್‌ಗಳ ಸಂಘದ ರಾಜ್ಯಮಟ್ಟದ ಸಭೆಯಲ್ಲಿ ಸರಕಾರವನ್ನು ನ್ಯಾಯಾಲಯಕ್ಕೆಳೆಯಲು ನಿರ್ಧರಿಸಲಾಗಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಿಲಿಂದ ಭೋಸ್ಲೆ ತಿಳಿಸಿದರು.

ಸರಕಾರದಿಂದ ತಮ್ಮ ಬಾಕಿ ಹಣಕ್ಕಾಗಿ ಉಭಯ ಸಂಘಗಳು ಕಳೆದೊಂದು ವರ್ಷದಿಂದಲೂ ಆಗ್ರಹಿಸುತ್ತಿವೆ. ಜುಲೈ 2024ರಿಂದ ವಿವಿಧ ಇಲಾಖೆಗಳಿಂದ ಬಾಕಿಯಿರುವ 89,000 ಕೋಟಿ ರೂ.ಗಳನ್ನು ಪಾವತಿಸದಿದ್ದರೆ ಪ್ರಗತಿಯಲ್ಲಿರುವ ಎಲ್ಲ ಮೂಲಸೌಕರ್ಯ ಯೋಜನೆಗಳನ್ನು ನಿಲ್ಲಿಸುವುದಾಗಿ ಫೆಬ್ರವರಿಯಲ್ಲಿ ಅವು ಎಚ್ಚರಿಕೆ ನೀಡಿದ್ದವು. ರಾಜ್ಯಾದ್ಯಂತ ಹಂತ ಹಂತವಾಗಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದರೂ ಗುತ್ತಿಗೆದಾರರಿಗೆ ಇನ್ನೂ ಹಣ ಪಾವತಿಯಾಗಿಲ್ಲ.

‘ನಮಗೆ ಕೇವಲ ಪೊಳ್ಳು ಭರವಸೆಗಳನ್ನು ನೀಡಲಾಗುತ್ತಿದೆ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಗುತ್ತಿಗೆದಾರರಿಗೆ ಬಾಕಿಯಿರುವ ಹಣದ ಬಗ್ಗೆ ಮಾತನಾಡಲು ಸಿದ್ಧರಿಲ್ಲ’ ಎಂದು ಭೋಸ್ಲೆ ದೂರಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News