×
Ad

Maharashtra | ಚಿರತೆ ದಾಳಿ ತಡೆಗೆ ಕಾಡಿಗೆ ಮೇಕೆ ಬಿಡಿ: ಅರಣ್ಯ ಸಚಿವರ ಸಲಹೆ!

Update: 2025-12-10 00:01 IST

Credit: PTI

ನಾಗಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಚಿರತೆ ದಾಳಿಗಳನ್ನು ತಡೆಗಟ್ಟಲು ಅರಣ್ಯ ಪ್ರದೇಶಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆಗಳನ್ನು ಬಿಡುವ ಮೂಲಕ “ಆಹಾರ ಲಭ್ಯತೆ” ಹೆಚ್ಚಿಸಬೇಕೆಂದು ಮಹಾರಾಷ್ಟ್ರ ಅರಣ್ಯ ಸಚಿವ ಗಣೇಶ್ ನಾಯಕ್ ಮಾಡಿದ ಸಲಹೆ ಹೊಸ ಚರ್ಚೆಗೆ ಕಾರಣವಾಗಿದೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಚಿರತೆ ದಾಳಿಗಳ ಕುರಿತು ಎನ್ಸಿಪಿ (ಎಸ್ಪಿ) ಶಾಸಕ ಜಿತೇಂದ್ರ ಅವಾದ್ ಅವರು ಎತ್ತಿದ ನಿಲುವಳಿ ಸೂಚನೆಗೆ ಪ್ರತಿಕ್ರಿಯಿಸುತ್ತಾ, ನಾಯಕ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. “ಚಿರತೆ ದಾಳಿಯಲ್ಲಿ ಒಬ್ಬರು ಸಾವಿಗೀಡಾದರೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುತ್ತದೆ. ಅದೇ ಹಣದಲ್ಲಿ ಮೇಕೆಗಳನ್ನು ಖರೀದಿಸಿ ಕಾಡಿಗೆ ಬಿಡುವುದರಿಂದ ದಾಳಿಗಳನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಅವರು ಹೇಳಿದರು.

ಚಿರತೆಗಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದಿದ್ದು, ಅರಣ್ಯ ಪ್ರದೇಶಗಳಿಂದ ಕಬ್ಬು ಬೆಳೆ ಪ್ರದೇಶಗಳತ್ತ ಅವುಗಳ ಸಂಚಾರ ಹೆಚ್ಚಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. “ಅಹಮದ್ನಗರ, ಪುಣೆ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಚಿರತೆ ದಾಳಿಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ತುರ್ತು ಹಾಗೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದರು.

ಸಚಿವರ ಈ ಹೇಳಿಕೆ ಪರಿಸರ ತಜ್ಞರ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ಚಿರತೆ–ಮಾನವ ಸಂಘರ್ಷಕ್ಕೆ ‘ಕಾಡಿಗೆ ಮೇಕೆ ಬಿಡುವುದು’ ಪರಿಹಾರವಾಗಬಹುದೇ ಎಂಬ ಪ್ರಶ್ನೆ ಹುಟ್ಟುಹಾಕಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News