×
Ad

ಮಹಾರಾಷ್ಟ್ರ: ಮೀರಾ ರೋಡ್ ಹಿಂಸಾಚಾರದಲ್ಲಿ ಪಾಲ್ಗೊಂಡವರ ಅಕ್ರಮ ಕಟ್ಟಡ ನೆಲಸಮ

Update: 2024-01-23 21:58 IST

Photo: Screengrab @TheSiasatDaily \ X

ಮುಂಬೈ: ಅಯೋಧ್ಯೆಯ ರಾಮ ಮಂದಿರದಲ್ಲಿ ಸೋಮವಾರ ಪ್ರಾಣ ಪ್ರತಿಷ್ಠಾಪನೆ ಮುನ್ನ ಹಾಗೂ ಬಳಿಕ ಹಿಂಸಾಚಾರದಲ್ಲಿ ತೊಡಗಿಕೊಂಡವರ ಮುಂಬೈ ಮಿರಾ ರಸ್ತೆ ಉಪನಗರದಲ್ಲಿರುವ ಕಾನೂನು ಬಾಹಿರ ಕಟ್ಟಡಗಳನ್ನು ಜಿಲ್ಲಾಡಳಿತ ಬುಲ್ಡೋಜರ್ ಗಳನ್ನು ಬಳಸಿ ಮಂಗಳವಾರ ನೆಲಸಮಗೊಳಿಸಿದೆ. 

ಮಿರಾ ರಸ್ತೆಯ ನಯಾ ನಗರ್ ಪ್ರದೇಶದ ಮೂಲಕ ಹಾದು ಹೋದ ಶ್ರೀ ರಾಮ ಶೋಭಾ ಯಾತ್ರೆಯ ಸಂದರ್ಭ ಭುಗಿಲೆದ್ದ ಘರ್ಷಣೆಗೆ ಸಂಬಂಧಿಸಿ 12 ಅಧಿಕ ಮಂದಿಯನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾರು, ಬೈಕ್ ಹಾಗೂ ಕೇಸರಿ ಧ್ವಜಗಳ ಮೇಲೆ ದುಷ್ಕರ್ಮಿಗಳ ಗುಂಪು ಕಲ್ಲೆಸೆದಿದೆ. ಇದರಿಂದ ಕೆಲವರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಉತ್ತರ ಪ್ರದೇಶದಲ್ಲಿ ಹಾಗೂ ಅನಂತರ ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳಲ್ಲಿ ಕ್ರಿಮಿನಲ್ ಗಳ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದಂತೆ ಇಲ್ಲಿ ಕೂಡ ಬುಲ್ಡೋಜರ್ ಬಳಸಿ ಘರ್ಷಣೆಯಲ್ಲಿ ಪಾಲ್ಗೊಂಡವರ 15 ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ಅಡ್ಡಿ ಉಂಟು ಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಅವರು ಸೋಮವಾರ ರಾತ್ರಿ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News