ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ | ಮಹಾಯುತಿಗೆ ಆರಂಭಿಕ ಮುನ್ನಡೆ: ಮುಂಬೈನಲ್ಲಿ ಮಹಾಯುತಿ-ಠಾಕ್ರೆಗಳ ನಡುವೆ ನಿಕಟ ಪೈಪೋಟಿ
Update: 2026-01-16 11:29 IST
Photo credit: PTI
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ಪ್ರಾರಂಭಗೊಂಡಿದ್ದು, ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಆರಂಭಿಕ ಮುನ್ನಡೆ ಲಭಿಸಿದೆ.
ಬೃಹನ್ ಮುಂಬೈ ನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಹಾಗೂ ಠಾಕ್ರೆ ಸಹೋದರರ ಮೈತ್ರಿಕೂಟದ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದೆ.
ನಾಗಪುರ ನಗರ ಪಾಲಿಕೆ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ.