×
Ad

SIR ದತ್ತಾಂಶಗಳನ್ನು ಸಾರ್ವಜನಿಕಗೊಳಿಸಿ, ಬಿಎಲ್ಒಗಳ ಮೇಲಿನ ಒತ್ತಡವನ್ನು ನಿಲ್ಲಿಸಿ: ಅಖಿಲೇಶ್ ಯಾದವ್ ಆಗ್ರಹ

Update: 2025-12-05 12:54 IST

ಅಖಿಲೇಶ್ ಯಾದವ್ (Photo: PTI)

ಲಕ್ನೊ: ಸದ್ಯ ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಮತಪಟ್ಟಿಗಳ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ (SIR) ದತ್ತಾಂಶಗಳನ್ನು ಸರಕಾರ ಸಾರ್ವಜನಿಕಗೊಳಿಸಬೇಕು ಹಾಗೂ ಮತಗಟ್ಟೆ ಅಧಿಕಾರಿಗಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.

ಮತಗಟ್ಟೆ ಅಧಿಕಾರಿಗಳ ಮೇಲೆ ಅಧಿಕ ಹೊರೆಯಾಗುವುದನ್ನು ತಪ್ಪಿಸಲು ಹೆಚ್ಚುವರಿ ಅಧಿಕೃತ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತಗಳನ್ನೂ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, "ಉತ್ತರ ಪ್ರದೇಶದಲ್ಲಿ ಸಂಪೂರ್ಣಗೊಂಡಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಜರಣೆ ಅಭಿಯಾನದ ಶೇಕಡಾವಾರು ಪ್ರಮಾಣವನ್ನು ತಕ್ಷಣವೇ ಪ್ರಕಟಿಸಬೇಕು" ಎಂದೂ ಸರಕಾರವನ್ನು ಆಗ್ರಹಿಸಿದ್ದಾರೆ.

ಮತಪಟ್ಟಿಗಳ ಪರಿಷ್ಕರಣೆಯ ಪಾರದರ್ಶಕತೆಯಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಈ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಅಧಿಕಾರದಲ್ಲಿರುವವರಾಗಲಿ ಅಥವಾ ಅವರ ಸಹಚರರಾಗಲಿ ಭಾಗಿಯಾಗದಂತೆ ಸರಕಾರ ಖಾತರಿ ಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News