×
Ad

ಮಾಲೆಗಾಂವ್: ಎಐಎಂಐಎಂ ನಾಯಕನ ಮೇಲೆ ಗುಂಡಿನ ದಾಳಿ

Update: 2024-05-27 13:35 IST

ಅಬ್ದುಲ್ ಮಲಿಕ್ ಮಹಮ್ಮದ್ ಯೂನುಸ್ ಈಸಾ | Photo credit ; freepressjournal.in

ನಾಸಿಕ್: ಮಹಾರಾಷ್ಟ್ರದ ಮಾಲೆಗಾಂವ್‌ನ ಮಾಜಿ ಮೇಯರ್ ಅಬ್ದುಲ್ ಮಲಿಕ್ ಮಹಮ್ಮದ್ ಯೂನುಸ್ ಈಸಾ ಮೇಲೆ ಇಂದು ಬೆಳಗ್ಗೆ ಅಪರಿಚಿತ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ.

ಅಸದುದ್ದೀನ್ ಉವೈಸಿಯವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಪ್ರಮುಖ ನಾಯಕರಾಗಿರುವ ಮಲಿಕ್ ಅವರ ಮೇಲೆ ಮೂರು ಗುಂಡುಗಳನ್ನು ಹಾರಿಸಲಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಮಲಿಕ್ ಅವರ ಎದೆಯ ಎಡಭಾಗದಲ್ಲಿ, ಎಡ ತೊಡೆಯ ಮತ್ತು ಬಲಗೈಗೆ ಗಾಯಗಳಾಗಿವೆ. ಗಾಯಗಳು ತೀವ್ರವಾಗಿದ್ದ ಕಾರಣ, ಅವರನ್ನು ನಾಸಿಕ್‌ನ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

ಮಾಲೆಗಾಂವ್ ನಗರ ಪೊಲೀಸ್ ಅಧಿಕಾರಿಯ ಪ್ರಕಾರ, ಓಲ್ಡ್ ಆಗ್ರಾ ರಸ್ತೆಯಲ್ಲಿರುವ ಅಂಗಡಿಯೊಂದರ ಹೊರಗೆ ಮಲಿಕ್ ಕುಳಿತಿದ್ದಾಗ ಈ ಘಟನೆ ಸಂಭವಿಸಿದೆ. ಸ್ಥಳೀಯ ಪೊಲೀಸರು ವ್ಯಾಪಕ ತನಿಖೆಯನ್ನು ಪ್ರಾರಂಭಿಸಿದ್ದು, ಆದರೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News