×
Ad

ಕೇಸರಿ ಧ್ವಜಕ್ಕೆ ಅವಮಾನಿಸಿದ ಆರೋಪ: ಯುವಕನಿಗೆ ಥಳಿಸಿ, ನಗ್ನ ಮೆರವಣಿಗೆ ನಡೆಸಿದ ಗ್ರಾಮಸ್ಥರು

Update: 2024-01-25 14:28 IST

Photo credit: indiatoday.in

ಹೈದರಾಬಾದ್:‌ ಕೇಸರಿ ಧ್ವಜವನ್ನು ಅವಮಾನಿಸಿ ರೀಲ್ಸ್‌ ಅಪ್‌ಲೋಡ್‌ ಮಾಡಿದ್ದಾನೆ ಎಂದು ಆರೋಪಿಸಿ ಯುವಕನೊಬ್ಬನಿಗೆ ಗ್ರಾಮಸ್ಥರು ಥಳಿಸಿ ಆತನ ನಗ್ನ ಮೆರವಣಿಗೆ ನಡೆಸಿದ ಘಟನೆ ತೆಲಂಗಾಣದ ಸಂಗಾರೆಡ್ಡಿ ಎಂಬಲ್ಲಿ ನಡೆದಿದೆ ಎಂದು indiatoday.in ವರದಿ ಮಾಡಿದೆ.

ರೀಲ್ಸ್‌ನಲ್ಲಿ ಆ ಯುವಕ, ಕೇಸರಿ ಧ್ವಜವನ್ನು ತನ್ನ ಪ್ಯಾಂಟ್‌ ಒಳಗೆ ಅವಮಾನಕಾರಿಯಾಗಿ ತುರುಕಿಸುತ್ತಿರುವುದು ಕಾಣಿಸುತ್ತದೆ. ಇದರಿಂದ ಆಕ್ರೋಶಿತರಾದ ಮೇದಕ್‌ ಜಿಲ್ಲೆಯ ಗ್ರಾಮವೊಂದರ ಜನರು ಆತನನ್ನು ಹಿಡಿದು ಥಳಿಸಿದ್ದಾರೆ. ಕೆಲ ವೀಡಿಯೋಗಳಲ್ಲಿ ಜೈ ಶ್ರೀ ರಾಮ್‌ ಘೋಷಣೆ ಮೊಳಗಿಸುವ ಜನರು ಆತನಿಗೆ ಥಳಿಸಿ ನಗ್ನ ಮೆರವಣಿಗೆ ನಡೆಸಿ ಹಾಗೂ ಆತನ ಖಾಸಗಿ ಅಂಗಗಳಿಗೆ ಬೆಂಕಿ ಹಚ್ಚುವ ಯತ್ನ ನಡೆಸುತ್ತಿರುವುದೂ ಕಾಣಿಸುತ್ತದೆ.

ಆತ ಹಿಂದುಗಳ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದಾನೆಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್‌ ದೂರು ನೀಡಿದ್ದಾರೆ. ಆತನ ವಿರುದ್ಧ ಐಪಿಸಿ ಸೆಕ್ಷನ್‌ 153(ಎ), 295-ಎ ಮತ್ತು 505 (2) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಯುವಕ ಕೂಡ ಗ್ರಾಮಸ್ಥರ ವಿರುದ್ಧ ತನಗೆ ಥಳಿಸಿದ್ದಕ್ಕೆ ದೂರು ದಾಖಲಿಸಿದ್ದಾನೆ, ಇದರನ್ವಯ ಗ್ರಾಮಸ್ಥರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್‌ 341, 323, 505(2) ಮತ್ತು 506 ಅನ್ವಯ ಪ್ರಕರಣ ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News