ಬೆಕ್ಕನ್ನು ರಕ್ಷಿಸಲೆಂದು ಬಾವಿಗೆ ಇಳಿದ ವ್ಯಕ್ತಿ ಸಾವು
ಸಾಂದರ್ಭಿಕ ಚಿತ್ರ
ಭುವನೇಶ್ವರ: ನಗರದ ಪಾಟಿಯಾ ರೈಲು ನಿಲ್ದಾಣದ ಬಳಿ ತೆರೆದ ಬಾವಿಗೆ ಬಿದ್ದ ಬೆಕ್ಕುನ್ನು ರಕ್ಷಿಸುವ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಐಸ್ ಕ್ರೀಮ್ ಮಾರಾಟಗಾರ 50 ವರ್ಷದ ಸಿಬಾರಾಮ್ ಸಾಹೂ ಅವರು ಬಾವಿಗೆ ಬೆಕ್ಕು ಬಿದ್ದಿರುವುದನ್ನು ನೋಡಿ ರಕ್ಷಣೆಗೆಂದು ಬಾವಿಗೆ ಹಾರಿದ್ದಾರೆ.
ಸಿಬರಾಂ ಸಾಹೂ ಅವರು ಹೊರಗೆ ಬಾರದೇ ಇದ್ದುದರಿಂದ ಮತ್ತಿಬ್ಬರು ಬಾವಿಗೆ ಇಳಿದಿದ್ದಾರೆ. ಆದರೆ, ಬಾವಿಯೊಳಗೆ ಅಸ್ವಸ್ಥರಾದ ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸಿಬರಾಂ ಸಾಹೂ ಅವರ ಮೃತದೇಹವನ್ನು ಬಾವಿಯಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
"ನಾನು ಸಿಬರಾಂಗೆ ಸಹಾಯ ಮಾಡಲು ಬಾವಿಗೆ ಇಳಿದೆ, ಆದರೆ ಅದರೊಳಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗದ ಕಾರಣ ಬೇಗನೆ ಹೊರಬಂದೆ" ಎಂದು ಅವರ ಸಹೋದರ ಭಜಮಾನ್ ಹೇಳಿದರು.
ಸಿಬರಾಂ ಸಾಹೂ ಗಂಜಾಂ ಜಿಲ್ಲೆಯವರಾಗಿದ್ದು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.