×
Ad

ಹರಿದ್ವಾರದ ಮಾನಸಾ ದೇವಿ ಹಿಲ್ಸ್ ನಲ್ಲಿ ರೀಲ್ಸ್ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದು ಯುವತಿ ಸ್ಥಿತಿ ಚಿಂತಾಜನಕ

Update: 2024-10-26 21:52 IST

PC : X \ @janabkhan08

ಹೊಸದಿಲ್ಲಿ : ಹರಿದ್ವಾರದ ಮಾನಸಾ ದೇವಿ ಹಿಲ್ಸ್‌ ನಲ್ಲಿ ಶನಿವಾರ ಯುವತಿಯೊಬ್ಬಳು ರೀಲ್ಸ್ ಮಾಡುತ್ತಿದ್ದಾಗ ಕಾಲು ಜಾರಿ 70 ಮೀಟರ್ ಆಳದ ಕಮರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಮುಜಾಫರ್ನಗರ ನಿವಾಸಿ ರೇಶು(28) ಎಂದು ಗುರುತಿಸಲಾಗಿದೆ. ಇವರು ಮಾನಸಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಲು ತನ್ನ ಕುಟುಂಬದೊಂದಿಗೆ ಹರಿದ್ವಾರಕ್ಕೆ ಬಂದಿದ್ದರು. ರೇಶು ರೀಲ್ಸ್ ಮಾಡುತ್ತಿದ್ದಾಗ ಕಾಲು ಜಾರಿ ಕಮರಿಗೆ ಬಿದ್ದಿದ್ದಾರೆ. ಯುವತಿ ಬಿದ್ದಿರುವುದನ್ನು ಗಮನಿಸಿದ ಕೆಲ ಪ್ರವಾಸಿಗರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ರಿಶು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಘಟನೆಯ ವೀಡಿಯೊದಲ್ಲಿ, ಯುವತಿಯನ್ನು ಪೊಲೀಸರು ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯುತ್ತಿರುವುದನ್ನು ತೋರಿಸುತ್ತದೆ. ಆಕೆಯ ಕುಟುಂಬದ ಸದಸ್ಯರು ಸೇರಿದಂತೆ ಪ್ರವಾಸಿಗರು ಈ ವೇಳೆ ಸ್ಥಳದಲ್ಲಿ ಜಮಾಯಿಸಿದ್ದರು.

ಯುವ ಸಮುದಾಯವು ಅಪಾಯವನ್ನು ಲೆಕ್ಕಿಸದೆ ಗೀಳಿಗಾಗಿ ಸೆಲ್ಫಿ ಮತ್ತು ರೀಲ್ಸ್ ಗಳನ್ನು ತೆಗೆಯುತ್ತಾರೆ. ಅಪಾಯಕಾರಿ ಬಂಡೆಗಳು, ವೇಗವಾಗಿ ಚಲಿಸುವ ರೈಲುಗಳು, ನದಿಗಳ ತಟದಲ್ಲಿ ಸೆಲ್ಫಿ ತೆಗೆದುಕೊಂಡು ತಮ್ಮನ್ನು ತಾವು ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ. ಹರಿದ್ವಾರದಲ್ಲಿ ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ದೊಡ್ಡ ಪಾಠವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News