×
Ad

ಮಣಿಪುರ: ಮೊಬೈಲ್ ಇಂಟರ್‌ನೆಟ್ ನಿರ್ಬಂಧ ಅ. 31ರ ವರೆಗೆ ವಿಸ್ತರಣೆ

Update: 2023-10-27 20:51 IST

File Photo

ಇಂಪಾಲ್: ಮಣಿಪುರದಲ್ಲಿ ಸರಕಾರ ಮೊಬೈಲ್ ಇಂಟರ್‌ನೆಟ್ ನಿರ್ಬಂಧವನ್ನು ಅಕ್ಟೋಬರ್ 31ರ ವರೆಗೆ ವಿಸ್ತರಿಸಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಮುಂದಿನ ಕೆಲವು ದಿನಗಳಲ್ಲಿ ನಿಷೇಧವನ್ನು ಸರಕಾರ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಹೇಳಿದ ಕೇವಲ ಒಂದು ವಾರಗಳ ಬಳಿಕ ಈ ಬೆಳವಣಿಗೆ ನಡೆದಿದೆ.

‘‘ಕಾನೂನು-ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುವ ಜನರ ಭಾವನೆಗಳನ್ನು ಕೆರಳಿಸುವ ಚಿತ್ರಗಳು, ದ್ವೇಷ ಭಾಷಣ ಹಾಗೂ ದ್ವೇಷದ ವೀಡಿಯೊಗಳನ್ನು ಪ್ರಸಾರ ಮಾಡಲು ಸಮಾಜ ವಿರೋಧಿ ಶಕ್ತಿಗಳು ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಬಹುದು. ಈ ಭೀತಿಯಿಂದ ಇಂಟರ್‌ನೆಟ್ ನಿರ್ಬಂಧ ವಿಸ್ತರಿಸಲಾಗಿದೆ ’’ ಎಂದು ಸರಕಾರದ ಅಧಿಸೂಚನೆ ತಿಳಿಸಿದೆ.

ಆಯುಕ್ತ (ಗೃಹ) ಟಿ. ರಂಜಿತ್ ಸಿಂಗ್ ಅವರ ಅಕ್ಟೋಬರ್ 25ರ ದಿನಾಂಕದ ಅಧಿಸೂಚನೆಯಲ್ಲಿ, ‘‘ಭದ್ರತಾ ಪಡೆಗಳೊಂದಿಗೆ ಜನರ ಮುಖಾಮುಖಿ, ಚುನಾಯಿತ ಸದಸ್ಯರ ನಿವಾಸಗಳಿಗೆ ಗುಂಪು ದಾಳಿ ನಡೆಸುವ ಪ್ರಯತ್ನ, ಪೊಲೀಸ್ ಠಾಣೆಯ ಎದುರು ಪ್ರತಿಭಟನೆಗಳು ಇನ್ನೂ ವರದಿಯಾಗುತ್ತಿವೆ’’ ಎಂದು ಡಿಜಿಪಿ ಅವರಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News