×
Ad

ಅಲ್ಪಸಂಖ್ಯಾತರು ಈಗ ಕಾಂಗ್ರೆಸ್ ಅಜೆಂಡಾದಲ್ಲಿಲ್ಲ: ಗುಲಾಂ ನಬಿ ಆಝಾದ್

Update: 2023-12-03 22:44 IST

ಗುಲಾಂ ನಬಿ ಆಝಾದ್ | Photo: PTI  

ಶ್ರೀನಗರ: ಕಾಂಗ್ರೆಸ್ ತನ್ನ ಅಜೆಂಡಾದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಹೊಂದಿಲ್ಲ ಮತ್ತು ಇದರಿಂದಾಗಿಯೇ ಅದು ಹೆಚ್ಚಿನ ವಿಧಾನಸಭಾ ಚುನಾವಣೆಗಳಲ್ಲಿ ಸೋಲನ್ನಪ್ಪಿದೆ ಎಂದು ಕಾಂಗ್ರೆಸ್ ನ ಮಾಜಿ ನಾಯಕ ಹಾಗೂ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಝಾದ್ ಪಾರ್ಟಿಯ ಅಧ್ಯಕ್ಷ ಗುಲಾಂ ನಬಿ ಆಝಾದ್ ಅವರು ರವಿವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಾದ್ಯಂತ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಾಂಗ್ರೆಸ್ ಉಲ್ಲೇಖಿಸಿಲ್ಲ. ಅಲ್ಪಸಂಖ್ಯಾತರ ಪರ ಹೋರಾಟಗಾರ ಎಂದು ಪರಿಗಣಿಸಲ್ಪಟ್ಟಿರುವ ಕಾಂಗ್ರೆಸ್ ಅಲ್ಪಸಂಖ್ಯಾತರ ಬಗ್ಗೆ ಮಾತನಾಡಿಲ್ಲ ಎನ್ನುವುದನ್ನು ನಾನು ಕಳೆದ 20-25 ದಿನಗಳಿಂದ ಗಮನಿಸಿದ್ದೇನೆ. ಈಗ ಕಾಂಗ್ರೆಸ್ನ ಅಜೆಂಡಾದಲ್ಲಿ ಅಲ್ಪಸಂಖ್ಯಾತರಿಲ್ಲ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News