ಮಿರ್ಜಾಪುರ್ : ದಾರುಲ್ ಹುದಾ ಕುರ್‌ಆನ್ ಮುದ್ರಣ ಸಂಕೀರ್ಣಕ್ಕೆ ಶಿಲಾನ್ಯಾಸ
Update: 2025-01-30 11:29 IST
ಹೈದರಾಬಾದ್: ದಾರುಲ್ ಹುದಾ ಕುರಾನ್ ಮುದ್ರಣ ಸಂಕೀರ್ಣದ ಶಿಲಾನ್ಯಾಸ ಸಮಾರಂಭವು ಜ 5 ರಂದು ವಿಕಾರಾಬಾದ್ ಜಿಲ್ಲೆಯ ಮಿರ್ಜಾಪುರ್ ಗ್ರಾಮದಲ್ಲಿ ನಡೆಯಿತು.
ಶೈಖ್ ಅಸ್ಗರ್ ಅಲಿ ಇಮಾಮ್ ಮಹದಿ ಸಲ್ಫೀ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುರ್‌ಆನ್ ಪಾರಾಯಣದೊಂದಿಗೆ ಉದ್ಘಾಟಿಸಲಾಯಿತು. ಶೈಖ್ ಸಲಾಹುದ್ದೀನ್ ಮಕ್ಬೂಲ್ ಅಹ್ಮದ್ ಸಲಫೀ ಮದನಿ ರವರು ಸಂದೇಶ ಭಾಷಣ ಮಾಡಿದರು.
ಪವಿತ್ರ ಕುರ್‌ಆನ್ ಮುದ್ರಣಕ್ಕಾಗಿ ಸಮರ್ಪಿತವಾಗಿ ನಿರ್ಮಿಸಲಿರುವ ಸಂಕೀರ್ಣಕ್ಕೆ ಶಿಲಾನ್ಯಾಸ ಸಮಾರಂಭದಲ್ಲಿ ಮುಸ್ಲಿಂ ಧಾರ್ಮಿಕ ನಾಯಕರು, ಗಣ್ಯ ವ್ಯಕ್ತಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.