×
Ad

ಇನ್ನೂ ಆರಂಭಗೊಳ್ಳದ ಮೋದಿ ಸರಕಾರ 2024ರಲ್ಲಿ ಘೋಷಿಸಿದ್ದ ಉದ್ಯೋಗ ಪ್ರೋತ್ಸಾಹಕ ಯೋಜನೆ; ವರದಿ

Update: 2025-04-07 16:41 IST

 Photo: X/@mansukhmandviya

ಹೊಸದಿಲ್ಲಿ: ಕಳೆದ ವರ್ಷದ ಜುಲೈನಲ್ಲಿ ಚುನಾವಣಾ ನಂತರದ ಬಜೆಟ್‌ನಲ್ಲಿ ಘೋಷಿಸಿದ್ದ ಉದ್ಯೋಗ ಪ್ರೋತ್ಸಾಹಕ ಯೊಜನೆಯನ್ನು ಮಾ.31ಕ್ಕೆ ವಿತ್ತವರ್ಷ ಅಂತ್ಯಕ್ಕೆ ಮುನ್ನ ಆರಂಭಿಸುವಲ್ಲಿ ಕೇಂದ್ರ ಸರಕಾರವು ವಿಫಲಗೊಂಡಿದೆ.

ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅರ್ಹ ಖಾಸಗಿ ಉದ್ಯೋಗದಾತರಿಗೆ ನೆರವಾಗಲು ವೇತನ ಸಬ್ಸಿಡಿ ಮತ್ತು ಭವಿಷ್ಯ ನಿಧಿ ವಂತಿಗೆಯನ್ನು ಮರುಪಾವತಿಸುವ ಉದ್ದೇಶವನ್ನು ಈ ಯೋಜನೆಯು ಹೊಂದಿತ್ತು. ಔಪಚಾರಿಕ ಕ್ಷೇತ್ರದಲ್ಲಿ ಹೊಸಬರನ್ನು ಉತ್ತೇಜಿಸಲು ಉದ್ಯೋಗ ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಗಾಗಿ 10,000 ರೂ.ಗಳನ್ನು ನಿಗದಿಗೊಳಿಸಲಾಗಿತ್ತು.

ಆದರೆ ಇಎಲ್‌ಐ ಯೋಜನೆಯ ಅಂತಿಮ ಕರಡನ್ನು ತಾನಿನ್ನೂ ಸಂಪುಟದ ಅನುಮೋದನೆಗಾಗಿ ಕಳುಹಿಸಿಲ್ಲ ಮತ್ತು ಯೋಜನೆಗಾಗಿ ನಿಗದಿಗೊಳಿಸಲಾಗಿದ್ದ ಬಹುತೇಕ ಸಂಪೂರ್ಣ ಮೊತ್ತವನ್ನು ಮರಳಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯವು ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ.

ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿರುವ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ವರ್ಷ ಯೋಜನೆಗೆ ಅನುಮೋದನೆಯನ್ನು ಪಡೆದುಕೊಳ್ಳುವಂತೆ ಕಾರ್ಮಿಕ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ಮಾ.28ರಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದ ವರದಿಯ ಪ್ರಕಾರ ಈ ವರ್ಷದ ಜನವರಿಯಲ್ಲಿ ವಿತ್ತ ಸಚಿವಾಲಯದ ವೆಚ್ಚ ಹಣಕಾಸು ಸಮಿತಿ(ಇಎಫ್‌ಸಿ)ಯು ಯೋಜನೆಗೆ ಒಪ್ಪಿಗೆ ನೀಡಿತ್ತು.

2024-25ನೇ ಸಾಲಿನಲ್ಲಿ ತಾನು ಮರಳಿಸಿರುವ 11,044.05 ಕೋಟಿ ರೂ.ಗಳಲ್ಲಿ ಇಎಲ್‌ಐ ಯೋಜನೆಗೆ ಸಂಬಂಧಿಸಿದ 9999.50 ಕೋಟಿ ರೂ.ಮೊತ್ತವು ಸೇರಿದೆ ಎಂದು ಸಚಿವಾಲಯವು ಸಂಸದೀಯ ಸಮಿತಿಗೆ ತಿಳಿಸಿದೆ. ಸುದ್ದಿಸಂಸ್ಥೆಯ ವರದಿಯಂತೆ ಪ್ರಸಕ್ತ ವಿತ್ತವರ್ಷಕ್ಕೆ ಯೋಜನೆಗಾಗಿ 20,000 ಕೋಟಿ ರೂ.ಗಳನ್ನು ನಿಗದಿಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News