×
Ad

ವಾಡಿಕೆಗೆ ಮೊದಲೇ ಕೇರಳ ಕರಾವಳಿ ಪ್ರವೇಶಿಸಿದ ಮುಂಗಾರು

Update: 2025-05-24 15:27 IST

ಸಾಂದರ್ಭಿಕ ಚಿತ್ರ | PC : PTI 

 

ತಿರುವನಂತಪುರಂ: ಇಂದು (ಶನಿವಾರ) ಬೆಳಗ್ಗೆ ಈಶಾನ್ಯ ಮಾನ್ಸೂನ್ ಮಾರುತಗಳು ಕೇರಳ ರಾಜ್ಯವನ್ನು ಅಧಿಕೃತವಾಗಿ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

2009ರ ನಂತರ ಇದೇ ಪ್ರಥಮ ಬಾರಿಗೆ ಮಾನ್ಸೂನ್ ಮಾರುತಗಳು ಕೇರಳವನ್ನು ಮುಂಚಿತವಾಗಿ ಪ್ರವೇಶಿಸಿದ್ದು, ಆ ವರ್ಷ ಮೇ 23ರಂದು ಮಾನ್ಸೂನ್ ಮಾರುತಗಳು ರಾಜ್ಯಕ್ಕೆ ಆಗಮಿಸಿದ್ದವು. ಐತಿಹಾಸಿಕವಾಗಿ1975ರ ನಂತರ, 1990ರಲ್ಲಿ ತುಂಬಾ ಮುಂಚಿತವಾಗಿ ಕೇರಳ ರಾಜ್ಯವನ್ನು ಪ್ರವೇಶಿಸಿದ್ದ ಮಾನ್ಸೂನ್ ಮಾರುತಗಳು, ಆ ವರ್ಷ ಮೇ 19ರಿಂದ ಮುಂಗಾರು ಮಳೆ ಸುರಿಸುವುದನ್ನು ಪ್ರಾರಂಭಿಸಿದ್ದವು.

ಹವಾಮಾನ ತಜ್ಞರ ಪ್ರಕಾರ, ಮಾನ್ಸೂನ್ ಮಾರುತಗಳು ಪ್ರವೇಶಿಸುವ ದಿನಾಂಕಕ್ಕೂ, ದೇಶಾದ್ಯಂತ ಆಗಲಿರುವ ಮಳೆ ಪ್ರಮಾಣಕ್ಕೂ ಯಾವುದೇ ಸಂಬಂಧವಿಲ್ಲ. ಕೇರಳಕ್ಕೆ ಮಾನ್ಸೂನ್ ಮಾರುತಗಳು ಮುಂಚಿತವಾಗಿ ಅಥವಾ ತಡವಾಗಿ ಆಗಮಿಸಿದ ಮಾತ್ರಕ್ಕೆ, ದೇಶದ ಇತರ ಭಾಗಗಳಲ್ಲೂ ಅದೇ ರೀತಿ ಅವು ವ್ಯಾಪಿಸುತ್ತವೆ ಎಂದು ಅರ್ಥವಲ್ಲ. ಅದು ದೊಡ್ಡ ಪ್ರಮಾಣದ ವೈಪರೀತ್ಯಗಳು ಹಾಗೂ ಜಾಗತಿಕ, ಪ್ರಾದೇಶಿಕ ಮತ್ತು ಸ್ಥಳೀಯ ಲಕ್ಷಣಗಳಂಥ ಗುಣ ಲಕ್ಷಣಗಳನ್ನು ಅವಲಂಬಿಸಿರುತ್ತದೆ ಎನ್ನುತ್ತಾರೆ.

2025 ರಲ್ಲಿ ಮುಂಗಾರು ವಾಡಿಕೆಗಿಂತ ಹೆಚ್ಚು ಮಳೆ ಸುರಿಸಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News