×
Ad

ಮೌಂಟ್ ಎವರೆಸ್ಟ್ ಏರಿದ್ದಕ್ಕಾಗಿ ಸನ್ಮಾನಿತ 100ಕ್ಕೂ ಹೆಚ್ಚು ಪರ್ವತಾರೋಹಿಗಳಲ್ಲಿ 10 ಮಂದಿ ಭಾರತೀಯರು

Update: 2025-05-27 21:16 IST

ಎವರೆಸ್ಟ್ ಶಿಖರ | PTI

ಹೊಸದಿಲ್ಲಿ: ಎಡ್ಮಂಡ್ ಹಿಲರಿ ಮತ್ತು ತೇನ್ಜಿಂಗ್ ನೊರ್ಗೆ ಅವರಿಂದ ಎವರೆಸ್ಟ್ ಶಿಖರದ ಮೊದಲ ಯಶಸ್ವಿ ಆರೋಹಣದ ಸ್ಮರಣಾರ್ಥ ಮಂಗಳವಾರ ನೇಪಾಳದಲ್ಲಿ ಸನ್ಮಾನಿಸಲಾದ 100ಕ್ಕೂ ಅಧಿಕ ಪರ್ವತಾರೋಹಿಗಳಲ್ಲಿ 10 ಭಾರತೀಯರು ಸೇರಿದ್ದಾರೆ.

ಪ್ರವಾಸೋದ್ಯಮ,ಸಂಸ್ಕೃತಿ ಮತ್ತು ನಾಗರಿಕ ವಾಯುಯಾನ ಸಚಿವ ಬದ್ರಿ ಪಾಂಡೆಯವರು ಮೇ 19ರ ಅಂತರರಾಷ್ಟ್ರೀಯ ಎವರೆಸ್ಟ್ ದಿನಕ್ಕೆ ಮುನ್ನ ನೇಪಾಳಿ ಮತ್ತು ಅಂತರರಾಷ್ಟ್ರೀಯ ಎವರೆಸ್ಟ್ ಶಿಖರಾರೋಹಿಗಳನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ನೇಪಾಳ, ಭಾರತ, ಚೀನಾ ,ಆಸ್ಟ್ರೇಲಿಯಾ, ಬಾಂಗ್ಲಾದೇಶ,ಸಿಂಗಾಪುರ,ಫಿಲಿಪ್ಪೀನ್ಸ್,ಫೆಲೆಸ್ತೀನ್ ಪ್ರದೇಶ ಮತ್ತು ಬ್ರಿಟನ್ ಸೇರಿದಂತೆ ವಿವಿಧ ದೇಶಗಳ 100ಕ್ಕೂ ಅಧಿಕ ಪರ್ವತಾರೋಹಿಗಳನ್ನು ಪ್ರಶಂಸಾ ಪತ್ರದೊಂದಿಗೆ ಗೌರವಿಸಲಾಯಿತು.

ಎವರೆಸ್ಟ್ ಅಲೈನ್ಸ್ ನೇಪಾಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿತ ಭಾರತೀಯರಲ್ಲಿ ಆಶಿಷ್ ಸಿಂಗ್, ನಿಶಾ ಕುಮಾರಿ, ಅನುಜಾ ವೈದ್ಯ, ಬಲ್ಜಿತ್ ಕೌರ್, ಸುವಿಧಾ ಕಡ್ಲಾಗ್, ಸೂರ್ಯಪ್ರಕಾಶ, ಶೇಖ್ ಹಿಮಾಂಶ, ಸತ್ಯರೂಪ ಸಿದ್ಧಾಂತ, ಜ್ಯೋತಿ ರಾಟ್ರೆ ಮತ್ತು ಅದಿತಿ ಸೇರಿದ್ದಾರೆ.

8,000 ಮೀ.ಗಿಂತ ಹೆಚ್ಚಿನ ಎತ್ತರದ ಎಲ್ಲ 14 ಶಿಖರಗಳನ್ನು ಹತ್ತಿರುವ ಮೊದಲ ದಕ್ಷಿಣ ಏಶ್ಯಾ ಪರ್ವತಾರೋಹಿ ನೇಪಾಳದ ಮಿಂಗ್ಮಾ ಶೆರ್ಪಾ ಮತ್ತು ಚೀನಾದ ಅತ್ಯಂತ ಕಿರಿಯ ಪರ್ವತಾರೋಹಿ ಷು ಝು ಒಯುನ್ ಅವರೂ ಸನ್ಮಾನವನ್ನು ಸ್ವೀಕರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News