ಮುನ್ಸಿಪಲ್ ಚುನಾವಣೆ | ಮೊಬೈಲ್ ಫೋನ್ ಮೂಲಕ ಮತದಾನದ ಸೌಲಭ್ಯ: ದಾಖಲೆ ನಿರ್ಮಿಸಿದ ಬಿಹಾರ
PC : X
ಪಾಟ್ನಾ: ಬಿಹಾರ ಶನಿವಾರ ನಡೆದ ಮುನ್ಸಿಪಲ್ ಚುನಾವಣೆಗಳಲ್ಲಿ ಪಾಟ್ನಾ,ರೋಹ್ಟಾಸ್ ಹಾಗೂ ಚಂಪಾರಣ್ ಜಿಲ್ಲೆಗಳ ಒಟ್ಟು 6 ನಗರಾಡಳಿತ ಸಂಸ್ಥೆಗಳಲ್ಲಿ ಮೊಬೈಲ್ ಫೋನ್ ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ.ಬಿಹಾರದಲ್ಲಿ ಮುನ್ಸಿಪಲ್ ಚುನಾವಣೆಗಳಲ್ಲಿ ಮೊಬೈಲ್ ಫೋನ್ ಮೂಲಕ ಮತದಾನದ ಸೌಲಭ್ಯ ಒದಗಿಸಿದ ಮೊದಲ ರಾಜ್ಯವೆಂಬ ದಾಖಲೆಗೆ ಬಿಹಾರ ಪಾತ್ರವಾಗಿದೆ.
ಮತಗಟ್ಟೆಗಳಿಗೆ ತೆರಳಲು ಸಾಧ್ಯವಾಗದವರಿಗಾಗಿ ಈ ಸೌಲಭ್ಯ ನೀಡಲಾಗಿದೆ. ಮೊಬೈಲ್ ಫೋನ್ ಮೂಲಕ ಮತಚಲಾಯಿಸುವ ಮತದಾರರು ತಮ್ಮ ಆಂಡ್ರಾಯ್ಢ್ ಫೋನ್‌ಗಳಲ್ಲಿ ಸಂಬಂಧಪಟ್ಟ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಬೇಕು ಹಿರಿಯ ನಾಗರಿಕರು, ಅಂಗವಿಕಲು ಹಾಗೂ ಗರ್ಭಿಣಿಯರು ಈ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ.
ಮುನ್ಸಿಪಲ್ ಸಂಸ್ಥೆಗಳ ಚುನಾವಣೆಗಳಲ್ಲಿ ಎಲ್ಲಾ ಬೂತ್‌ಗಳಲ್ಲಿ ಇವಿಎಂಗಳ ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಒಟ್ಟು 489 ಬೂತ್ ಗಳ ನಿರ್ದಿಷ್ಟ ಮತದಾರರು ಮನೆಯಲ್ಲಿ ಕುಳಿತುಕೊಂಡು ಮೊಬೈಲ್ ಫೋನ್ ಆ್ಯಪ್ ಮೂಲಕ ಮತಚಲಾಯಿಸಬಹುದಾಗಿದೆ.