×
Ad

ಭವಿಷ್ಯದಲ್ಲಿ ಚುನಾವಣೆಗಳು ನಡೆಯುವ ಬಗ್ಗೆಯೇ ಅನುಮಾನವಿದೆ:‌ ಪ್ರಿಯಾಂಕಾ ಗಾಂಧಿ ಕಳವಳ

"ಮತಗಳ್ಳತನದ ಮೂಲಕ ಬಿಹಾರದಲ್ಲಿ ಸರಕಾರ ರಚಿಸಲು ಎನ್‌ಡಿಎ ಹವಣಿಸುತ್ತಿದೆ"

Update: 2025-11-05 16:03 IST

ಪ್ರಿಯಾಂಕಾ ಗಾಂಧಿ (Photo: PTI)

ಪಾಟ್ನಾ: ಎನ್‌ಡಿಎ ಮೈತ್ರಿಕೂಟ ಮತಗಳ್ಳತನದ ಮೂಲಕ ಬಿಹಾರದಲ್ಲಿ ಸರಕಾರ ರಚಿಸಲು ಬಯಸುತ್ತಿದೆ ಎಂದು ಬುಧವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದು, ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ಮೂಲಕ ಮಹಿಳೆಯರೂ ಸೇರಿದಂತೆ 65 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ದೂರಿದರು.

ಪಶ್ಚಿಮ ಚಂಪಾರಣ್ ಜಿಲ್ಲೆಯ ವಾಲ್ಮೀಕಿ ನಗರ್ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ, ಹಾಲಿ ದೇಶದ ಪರಿಸ್ಥಿತಿಯು ಬ್ರಿಟಿಷ್ ರಾಜ್ ನಂತೆಯೇ ಇದ್ದು, ಭವಿಷ್ಯದಲ್ಲಿ ಚುನಾವಣೆಗಳು ನಡೆಯುವ ಬಗ್ಗೆಯೇ ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದರು.

“ಇಂದು ಬೆಳಗ್ಗೆ ನನ್ನ ಸಹೋದರ ರಾಹುಲ್ ಗಾಂಧಿ ಹರ್ಯಾಣದಲ್ಲಿನ ಮತಗಳ್ಳತನದ ಕುರಿತು ಲೆಕ್ಕ ನೀಡಿದ್ದಾರೆ” ಎಂದು ಹೇಳುವ ಮೂಲಕ, ಉತ್ತರ ಭಾರತದಲ್ಲಿ ವ್ಯಾಪಕ ಪ್ರಮಾಣದ ಚುನಾವಣಾ ಅಕ್ರಮಗಳನ್ನು ನಡೆಸಲಾಗಿದೆ ಎಂಬ ತಮ್ಮ ಸಹೋದರ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯ ಆರೋಪವನ್ನು ಪುನರುಚ್ಚರಿಸಿದರು.

“ಎನ್‌ಡಿಎ ಎಲ್ಲವನ್ನೂ ನಾಶಗೊಳಿಸಲಿದೆ. ಭವಿಷ್ಯದಲ್ಲಿ ಚುನಾವಣೆಗಳು ನಡೆಯಲಿವೆಯೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ನೀವೇಕೆ ಮೌನವಾಗಿದ್ದೀರಿ? ಅವರನ್ನು ಅಧಿಕಾರದಿಂದ ಒದ್ದೋಡಿಸಿ” ಎಂದು ಅವರು ಬಿಹಾರದ ಜನತೆಗೆ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯ ವಿರುದ್ಧವೂ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಅವರು ಇಂಡಿಯಾ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರ ಭಾವಚಿತ್ರ ಕಾಂಗ್ರೆಸ್ ಭಿತ್ತಿ ಫಲಕಗಳಲ್ಲಿ ಕಾಣೆಯಾಗಿರುವ ಕುರಿತು ಹೆಚ್ಚು ಆತಂಕಗೊಂಡಿದ್ದಾರೆಯೇ ಹೊರತು, ಅಪರಾಧಗಳು ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕುರಿತಾಗಲಿ ಅಥವಾ ಯುವಕರಿಗೆ ಜಾಗೃತಿ ಮೂಡಿಸುವುದರ ಕುರಿತಾಗಲಿ ಅಲ್ಲ ಎಂದೂ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News