×
Ad

ಪಶ್ಚಿಮ ಬಂಗಾಳ ಎಸ್‌ಐಆರ್| ಈವರೆಗೆ 14 ಲಕ್ಷ ಎಣಿಕೆ ನಮೂನೆಗಳನ್ನು ‘ಸಂಗ್ರಹಿಸಲಾಗದವು’ ಎಂದು ಗುರುತಿಸಿದ ಚುನಾವಣಾ ಆಯೋಗ

Update: 2025-11-26 15:56 IST

Photo credit: ANI

ಹೊಸದಿಲ್ಲಿ: ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈವರೆಗೆ ಸುಮಾರು 14 ಲಕ್ಷ ಎಣಿಕೆ ನಮೂನೆಗಳನ್ನು ‘ಸಂಗ್ರಹಿಸಲಾಗದವು’ ಎಂದು ಗುರುತಿಸಲಾಗಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಮತದಾರರು ಗೈರಾಗಿರಬಹುದು,ನಕಲು ಆಗಿರಬಹುದು, ನಿಧನರಾಗಿರಬಹುದು ಅಥವಾ ಶಾಶ್ವತವಾಗಿ ಸ್ಥಳಾಂತರಗೊಂಡಿರಬಹುದು,ಹೀಗಾಗಿ ಈ ಎಣಿಕೆ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಯೋರ್ವರು ಹೇಳಿದರು.

‘ಮಂಗಳವಾರ ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ 13.92 ಲಕ್ಷ ಆಗಿತ್ತು ಮತ್ತು ಇದು ಪ್ರತಿದಿನವೂ ಏರುತ್ತಲೇ ಇರುತ್ತದೆ ಎಂದು ನಾವು ನಿರೀಕ್ಷಿಸಿದ್ದೇವೆ’ ಎಂದರು.

ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಫಾರ್ಮ್‌ಗಳನ್ನು ವಿತರಿಸುತ್ತಿದ್ದಾರೆ ಮತ್ತು ಅಗತ್ಯ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದೂ ಅವರು ತಿಳಿಸಿದರು.

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಗಾಗಿ 80,600ಕ್ಕೂ ಅಧಿಕ ಬಿಎಲ್‌ಒಗಳು,ಸುಮಾರು 8,000 ಮೇಲ್ವಿಚಾರಕರು,3,000 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳು ಮತ್ತು 294 ಚುನಾವಣಾ ನೋಂದಣಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News