×
Ad

ದೆಹಲಿಯಲ್ಲಿ ನೇಪಾಳದ ರಾಷ್ಟ್ರೀಯ ದಿನಾಚರಣೆ: ಕೇಂದ್ರ ಸಚಿವ ವಿ. ಸೋಮಣ್ಣ ಭಾಗಿ

Update: 2024-09-19 21:57 IST

ಹೊಸದಿಲ್ಲಿ: ದೆಹಲಿಯಲ್ಲಿ ಇಂದು ನಡೆದ ನೇಪಾಳದ ರಾಷ್ಟ್ರೀಯ ದಿನಾಚರಣೆಯ ಸಮಾರಂಭದಲ್ಲಿ ಕೇಂದ್ರ ರೈಲ್ವೆ ಹಾಗು ಜಲ ಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಭಾಗಿಯಾದರು.

ಮುಖ್ಯ ಅತಿಥಿ ಸಚಿವ ವಿ.ಸೋಮಣ್ಣ ಅವರನ್ನು ನೇಪಾಳದ ರಾಯಭಾರಿ ಡಾ. ಸುರೇಂದ್ರ ಥಾಪಾ ಅವರು ಸ್ವಾಗತಿಸಿ, ಭಾರತ - ನೇಪಾಳದ ನಿಕಟ ಸಂಬಂಧವನ್ನು ಶ್ಲಾಘಿಸಿದರು.





ಸಚಿವ ಸೋಮಣ್ಣ ಮಾತನಾಡಿ, ಭಾರತ - ನೇಪಾಳದ ಮಧ್ಯೆ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ ಸಂಬಂಧಗಳಿದ್ದು ಮುಂದಿನ ದಿನಗಳಲ್ಲಿ ಮೂಲಭೂತ ಸೌಕರ್ಯ, ಡಿಜಿಟಲ್ ಹಾಗೂ ಫೈನಾನ್ಸಿಯಲ್ ಕನೆಕ್ಟಿವಿಟಿ, ಜಲವಿದ್ಯುತ್, ರೈಲ್ವೆ - ರಸ್ತೆ ಸಾರಿಗೆ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿ, ಭಾರತವು ನೆಪಾಲದೊಂದಿಗಿನ ಸಂಬಂಧ - ಸಂಪರ್ಕ ಇನ್ನಷ್ಟು ಹತ್ತಿರವಾಗಿಸಲು ಉತ್ಸುಕವಾಗಿದೆ ಎಂದರು. ನೇಪಾಳದ ಜನತೆಗೆ ರಾಷ್ಟ್ರೀಯ ದಿನದ ಶುಭ ಕೋರಿದರು.











Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News