×
Ad

ಪ್ರಧಾನಿ ಮೋದಿ ಕುರಿತು ʼಗೂಗಲ್‌ ಎಐ ಜೆಮಿನಿʼ ಉತ್ತರ ಐಟಿ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದ ಕೇಂದ್ರ ಸಚಿವ

Update: 2024-02-23 16:57 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಗೆ ಸಂಬಂಧಿಸಿದ ಪ್ರಶ್ನೆಗೆ ಗೂಗಲ್‌ನ ಎಐ ಸಾಧನ ಜೆಮಿನಿಯ ಪ್ರತಿಕ್ರಿಯೆಯು ಭಾರತದ ಐಟಿ ನಿಯಮಗಳು ಹಾಗೂ ಕ್ರಿಮಿನಲ್‌ ದಂಡ ಸಂಹಿತೆಯ ಹಲವು ನಿಬಂಧನೆಗಳ ನೇರ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್‌ ರಾಜ್ಯ ಸಚಿವ ಸಚಿವ ರಾಜೀವ್‌ ಚಂದ್ರಶೇಖರ್‌ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸೂಕ್ತ ಪರಿಹಾರ ಕ್ರಮಕ್ಕೆ ಆಗ್ರಹಿಸಿ ಸಚಿವರು ತಮ್ಮ ಟ್ವೀಟ್‌ನಲ್ಲಿ ಗೂಗಲ್‌ ಇಂಡಿಯಾ ಮತ್ತು ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವಾಲಯವನ್ನೂ ಟ್ಯಾಗ್‌ ಮಾಡಿದ್ದಾರೆ.

ಎಕ್ಸ್‌ ನಲ್ಲಿ ಪೋಸ್ಟ್‌ ಒಂದರ ಮೂಲಕ ಜೆಮಿನಿಯ ತಾರತಮ್ಯಕಾರಿ ಪ್ರತಿಕ್ರಿಯೆಯ ಕುರಿತು ಬಳಕೆದಾರರೊಬ್ಬರು ಗಮನ ಸೆಳೆದಾಗ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಅಂತಹುದೇ ಪ್ರಶ್ನೆಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಉಕ್ರೇನ್‌ ಅಧ್ಯಕ್ಷ ವೊಲೊಡೈಮೈರ್‌ ಝೆಲೆನ್ಸ್ಕಿ ಬಗ್ಗೆ ಕೇಳಿದಾಗ ಜೆಮಿನಿಯ ಉತ್ತರ ಎಚ್ಚರಿಕೆಯಿಂದ ಕೂಡಿದೆ ಎಂದು ಬಳಕೆದಾರರು ಸ್ಕ್ರೀನ್‌ಶಾಟ್‌ ಮೂಲಕ ವಿವರಿಸಿದ್ದಾರೆ. +

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News