×
Ad

ಫ್ಯಾಕ್ಟರಿ ಸ್ಥಾಪಿಸಿ ಎಂದು ಕೋರಿದ ಮಹಿಳೆಗೆ ಮುಂದಿನ ಚಂದ್ರಯಾನ-4 ಮಿಷನ್‌ನಲ್ಲಿ ಚಂದ್ರನಲ್ಲಿಗೆ ಕಳುಹಿಸುವುದಾಗಿ ಹೇಳಿದ ಹರ್ಯಾಣ ಸಿಎಂ!

Update: 2023-09-08 12:26 IST

ಮನೋಹರಲಾಲ್‌ ಖಟ್ಟರ್‌ (PTI)

ಚಂಡೀಗಢ: ತನ್ನ ಗ್ರಾಮದಲ್ಲಿ ಫ್ಯಾಕ್ಟರಿ ಸ್ಥಾಪಿಸುವಂತೆ ಕೋರಿದ ಮಹಿಳೆಗೆ ಆಕೆಯನ್ನು ಚಂದ್ರಯಾನ-4 ಮಿಷನ್‌ನಲ್ಲಿ ಚಂದ್ರನಲ್ಲಿ ಕಳುಹಿಸುವುದಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್‌ ಅವರು ಸಾರ್ವಜನಿಕ ಸಭೆಯೊಂದರಲ್ಲಿ ತಮಾಷೆಯಾಗಿ ಹೇಳಿಕೊಂಡ ವಿದ್ಯಮಾನದ ವೀಡಿಯೋವೊಂದು ವೈರಲ್‌ ಆಗಿದೆ. ಆದರೆ ಈ ವೀಡಿಯೋ ಸತ್ಯಾಸತ್ಯತೆ ಇನ್ನೂ ದೃಢೀಕರಣಗೊಂಡಿಲ್ಲ ಎಂದು indianexpress.com ವರದಿ ಮಾಡಿದೆ.

ರಾಜ್ಯಸಭಾ ಸಂಸದ ಹಾಗೂ ಕಾಂಗ್ರೆಸ್‌ ನಾಯಕ ದೀಪೇಂದರ್‌ ಸಿಂಗ್‌ ಹೂಡಾ ಈ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.  ಖಟ್ಟರ್‌ ಭಾಗವಹಿಸಿದ್ದ ಸಭೆ ಗುರುವಾರ ಹಿಸಾರ್‌ ಜಿಲ್ಲೆಯ ಕುಲಾನ ಗ್ರಾಮದಲ್ಲಿ ನಡೆದಿತ್ತೆನ್ನಲಾಗಿದೆ.

ಸಾರ್ವಜನಿಕರ, ಪ್ರಮುಖವಾಗಿ ಮಹಿಳೆಯರ ಭಾವನೆ ಮತ್ತು ಬೇಡಿಕೆಗಳ ಕುರಿತಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಸ್ಯ ಮಾಡುವುದು ಮುಖ್ಯಮಂತ್ರಿ ಖಟ್ಟರ್‌ ಸಾಹೇಬ್‌ ಅವರ ದೈನಂದಿನ ಪದ್ಧತಿಯಾಗಿ ಬಿಟ್ಟಿದೆ. ನನ್ನ ಮಾತು ನೆನಪಿಡಿ ಈ ಬಾರಿ ಅವರ ದರ್ಪ ಇಳಿಸಲಾಗುವುದು,” ಎಂದು ಹೂಡಾ ಬರೆದಿದ್ದಾರೆ.

ತನ್ನ ನೆರೆಯ ಗ್ರಾಮವಾದ ಭಟೋಲ್‌ ಜತ್ತನ್‌ ಎಂಬಲ್ಲಿ ಫ್ಯಾಕ್ಟರಿ ನಿರ್ಮಿಸಿ ಮಹಿಳೆಯರಿಗೆ ಉದ್ಯೋಗಾವಕಾಶ ಒದಗಿಸಬೇಕೆಂದು ಮಹಿಳೆ ಕೇಳಿದ್ದರು. ಆ ತಕ್ಷಣ ಸ್ಪಂದಿಸಿದ ಖಟ್ಟರ್‌, “ಅಗ್ಲೀ ಬಾರ್‌ ಚಾಂದ್‌ ಕೆ ಊಪರ್‌ ಏಕ್‌ ಔರ್‌ ಜೋ ಜಾಯೇಗಾ ನಾ, ಚಂದ್ರಯಾನ್-‌4, ಉಸ್ಮೇ ಭೇಜೇಂಗೆ, ಬೈಠ್ ಜಾವೋ” (ಮುಂದಿನ ಬಾರಿ ಚಂದ್ರನ ಮೇಲೆ ಚಂದ್ರಯಾನ-4 ಹೋಗುವಾಗ ಅದರಲ್ಲಿ ಕಳಿಸ್ತೇವೆ, ಕುಳಿತ್ಕೋ) ಎಂದು ಹೇಳುತ್ತಾರೆ.

ಈ ವೀಡಿಯೋ ಸತ್ಯಾಸತ್ಯತೆ ದೃಢೀಕರಣಗೊಂಡಿಲ್ಲದೇ ಇದ್ದರೂ ಕಾಂಗ್ರೆಸ್‌ ನಾಯಕರು ಇದೇ ವಿಚಾರದಲ್ಲಿ ಖಟ್ಟರ್‌ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಬಿಜೆಪಿ ಸಿಎಂ ಅಧಿಕಾರದ ಅಹಂಕಾರ ಮತ್ತು ಮಹಿಳಾ ವಿರೋಧಿ ಮನಸ್ಥಿತಿಯನ್ನು ಲಜ್ಜೆಗೆಟ್ಟು ತೋರ್ಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

ಈ ವಿವಾದ ಕುರಿತು ಪ್ರತಿಕ್ರಿಯಿಸಿದ ಹರ್ಯಾಣ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಪ್ರವೀಣ್‌ ಅಟ್ರೆ, “ಅರ್ಧ ಸತ್ಯವನ್ನು ವೈರಲ್‌ ಮಾಡಿವೆ” ಎಂದು ವಿಪಕ್ಷಗಳನ್ನು ಟೀಕಿಸಿದ್ದಾರೆ.

ಈ ಜನರು ಸಂಪೂರ್ಣ ಸಂವಾದ ನೋಡುವುದಿಲ್ಲ. ತಮಗೆ ಬೇಕಿದ್ದಷ್ಟನ್ನು ನೋಡಿ ಶೇರ್‌ ಮಾಡಿ ಬ್ರೌನೀ ಪಾಯಿಂಟ್‌ ಗಳಿಸುತ್ತಾರೆ. ರಾಜ್ಯದಲ್ಲಿ 55000 ಸ್ವಸಹಾಯ ಗುಂಪುಗಳಿವೆ, ಅವುಗಳಲ್ಲಿ 5 ಲಕ್ಷ ಮಹಿಳೆಯರು ಕೆಲಸ ಮಾಡುತ್ತಾರೆಂದು ಹೇಳಿದ ಮುಖ್ಯಮಂತ್ರಿ ಮಹಿಳೆಗೆ ಸ್ವಸಹಾಯ ಗುಂಪು ರಚಿಸಲು ಹೇಳುತ್ತಾರೆ. ಫ್ಯಾಕ್ಟರಿ ಸ್ಥಾಪಿಸಲಾಗುವುದು ಆದರೆ ಮೊದಲು ಸ್ವಸಹಾಯ ಗುಂಪು ರಚಿಸಿ,” ಎಂದಿದ್ದಾರೆ,” ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News