×
Ad

ದೂರವಾದ ನಿಫಾ ಭೀತಿ; ಕೇರಳದ ಎಲ್ಲ ನಾಲ್ವರು ಸೋಂಕಿತರು ಗುಣಮುಖ

Update: 2023-09-29 12:59 IST

Photo: PTI

ಕೋಝಿಕ್ಕೋಡ್: ಈ ವರ್ಷ ಕೇರಳದಲ್ಲಿ ನಿಫಾ ಸೋಂಕು ದೃಢಪಟ್ಟಿದ್ದ ಎಲ್ಲ ನಾಲ್ವರು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಶುಕ್ರವಾರ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಸೋಂಕಿತ ರೋಗಿಗಳು ಎರಡು ಬಾರಿ ನಿಫಾ ಸೋಂಕಿನ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಪಡೆದಿದ್ದರಿಂದ ಅವರನ್ನು ನಿಫಾ ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಘೋಷಿಸಲಾಗಿದೆ. ನಿಗದಿತ ಅವಧಿಯ ನಂತರ ಇಬ್ಬರು ರೋಗಿಗಳ ನಿಫಾ ಸೋಂಕು ಪರೀಕ್ಷೆಯು ನೆಗೆಟಿವ್ ಬಂದಿರುವುದರಿಂದ ಅವರನ್ನು ನಿಫಾ ಸೋಂಕು ಮುಕ್ತ ಎಂದು ಪರಿಗಣಿಸಲಾಗಿದೆ.

ಕೇರಳ ಸರ್ಕಾರವು ನಿಫಾ ಸೋಂಕು ಸಂಬಂಧ ವಿಧಿಸಿದ್ದ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News