ರಸಾಯನಶಾಸ್ತ್ರ ವಿಭಾಗದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ
Update: 2024-10-09 16:00 IST
Photo:X/@NobelPrize
ಹೊಸದಿಲ್ಲಿ: 2024ರ ಸಾಲಿನ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಬಹುಮಾನಕ್ಕೆ ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್, ಜಾನ್ ಜಂಪರ್ ಅವರನ್ನು ಆಯ್ಕೆ ಮಾಡಲಾಗಿದೆ.
ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ರಸಾಯನಶಾಸ್ತ್ರ ವಿಭಾಗದಲ್ಲಿನ 2024ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದೆ.
ಡೇವಿಡ್ ಬೇಕರ್ ಅವರಿಗೆ "ಕಂಪ್ಯೂಟೇಶನಲ್ ಪ್ರೊಟೀನ್ ಡಿಸೈನ್ʼ ಗಾಗಿ ಮತ್ತು ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಅವರಿಗೆ ʼಪ್ರೊಟಿನ್ ಸ್ಟ್ರಕ್ಚರ್ ಪ್ರಿಡಿಕ್ಸನ್ʼ ಗಾಗಿ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.